ಬಜಪೆ: ಕೊಳಂಬೆಯ ತಲಕಲ ಎಂಬಲ್ಲಿ ದೇವಿಪ್ರಸಾದ ತೀರ್ಥ ಸ್ವಾಮೀಜಿ(50)ಎಂಬುವರು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅವರು ಕೊಳಂಬೆಯ ತಲಕಲದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಧರ್ಮ ಚಾವಡಿಯ ಧರ್ಮದರ್ಶಿಯಾಗಿದ್ದರು. ಇವರ ಪೂರ್ವ ಶ್ರಮದ ಹೆಸರು ದೇವಿಪ್ರಸಾದ ಶೆಟ್ಟಿ. 5 ವರ್ಷಗಳ ಹಿಂದೆಯೇ ಸನ್ಯಾಸ ದೀಕ್ಷೆಯನ್ನು ಇವರು ಪಡೆದುಕೊಂಡಿದ್ದರು. ತಲಕಲದ ಮಠದಲ್ಲಿ ವಾಸವಾಗಿದ್ದರು.ಅತ್ಮಹತ್ಯೆಗೆ ಕಾರಣ ಇನ್ನಷ್ಟೆ ತಿಳಿದುಬರಬೇಕಿದೆ.
ಘಟನಾ ಸ್ಥಳಕ್ಕೆ ಬಜಪೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
PublicNext
22/07/2022 06:26 pm