ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: "ಗಣಿಗಾರಿಕೆಯಿಂದ ಶ್ರೀ ಕ್ಷೇತ್ರ ಕಾರಿಂಜ ಅಪಾಯದಲ್ಲಿ!" ; ಪೇಜಾವರ ಶ್ರೀ ಕಳವಳ

ಬಂಟ್ವಾಳ: ದ.ಕ. ಜಿಲ್ಲೆಯ ಪುರಾತನ ತೀರ್ಥ ಕೇತ್ರಗಳಲ್ಲಿ ಒಂದಾದ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಪರಿಸರದಲ್ಲಿ ಗಣಿಗಾರಿಕೆಯಿಂದ ಕ್ಷೇತ್ರದ ಪಾವಿತ್ರ್ಯಕ್ಕೆ ಅಪಾಯ ಎದುರಾಗುವ ಸಾಧ್ಯತೆ ಕಂಡುಬರುತ್ತಿದ್ದು, ತಕ್ಷಣ ಪರವಾನಗಿ ರದ್ದುಗೊಳಿಸಿ ಈ ಪವಿತ್ರ ಕ್ಷೇತ್ರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸರಕಾರ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಒತ್ತಾಯಿಸಿದ್ದಾರೆ.

ಶನಿವಾರ ಶ್ರೀಕ್ಷೇತ್ರ ಕಾರಿಂಜ ಪಾರ್ವತಿ - ಪರಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಗಣಿಗಾರಿಕೆಯಿಂದಾಗಿ ಭಾಗಶ: ಹಾನಿಯಾಗಿದ್ದು, ದೇವಾಲಯ ನಿಂತಿರುವ ಶಿಲೆಗಳು ಬಿರುಕುಬಿಟ್ಟಿವೆ. ಹಾಗಾಗಿ ಇಂತಹ ಪವಿತ್ರ ಕ್ಷೇತ್ರಕ್ಕೆ ಕಿಂಚಿತ್ತು ಧಕ್ಕೆಯಾಗದಂತೆ ಸಂರಕ್ಷಿಸುವುದು ಸಮಸ್ತ ಹಿಂದೂ ಸಮಾಜದ ಹೊಣೆ ಎಂದರು.

ಶುಕ್ರವಾರ ಮಠಕ್ಕೆ ಭೇಟಿ ನೀಡಿದ್ದ ರಾಜ್ಯದ ಗಣಿ ಸಚಿವರಿಗೆ ಗಣಿಗಾರಿಕೆಯಿಂದ ಕಾರಿಂಜ ಕ್ಷೇತ್ರದ ಸಾನಿಧ್ಯಕ್ಕಾಗುತ್ತಿರುವ ಅಪಾಯದ ಬಗ್ಗೆ ಮನವಿ ಮೂಲಕ ಗಮನಕ್ಕೆ ತರಲಾಗಿದ್ದು, ಸಚಿವರೂ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಹಿಜಾಂವೇ ದಕ್ಷಿಣ ಪ್ರಾಂತ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ, ದೇವಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮತ್ತಿತರರು ಇದ್ದರು.

Edited By : Shivu K
Kshetra Samachara

Kshetra Samachara

30/01/2022 01:47 pm

Cinque Terre

15.89 K

Cinque Terre

2

ಸಂಬಂಧಿತ ಸುದ್ದಿ