ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಗಜ್ಜನಿಗೆ ಅವಮಾನ: ಕಾರ್ಕಳದಲ್ಲಿ ವ್ಯಕ್ತಿಯ ವಿರುದ್ಧ ದೂರು ದಾಖಲು

ಕಾರ್ಕಳ: ವಿಟ್ಲದಲ್ಲಿ ಮದುಮಗನೊಬ್ಬ ಕೊರಗಜ್ಜನ ವೇಷ ಧರಿಸಿದ ವಿವಾದ ತಣ್ಣಗಾಗುವ ಮೊದಲೇ ಕಾರ್ಕಳದಲ್ಲಿ ಇಂತಹದ್ದೇ ಘಟನೆ ನಡೆದಿದೆ. ತುಳುನಾಡಿನ ಆರಾಧ್ಯದೈವ ಕೊರಗಜ್ಜನಿಗೆ ಅವಮಾನ ಮಾಡಿದ ಆರೋಪದಲ್ಲಿ ಯುವಕನ ವಿರುದ್ಧ ಉಡುಪಿಯ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳದ ಈದು ನಿವಾಸಿ ರವೀಂದ್ರ ಎನ್ನುವಾತ ಸ್ಟೇಟಸ್ ಹಾಕಿ ಅಪಹಾಸ್ಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ರವೀಂದ್ರ ಎನ್ನುವಾತ ಕೊರಗಜ್ಜ‌ನಿಗೆ ಅಪಹಾಸ್ಯ ಮಾಡುವ ರೀತಿಯ ಪೋಟೋ ಸ್ಟೇಟಸ್ ಹಾಕಿದ್ದ, ಇದನ್ನು ಗಮನಿಸಿದ ಯೋಗೀಶ್ ಎನ್ನುವವರು ರವೀಂದ್ರನಿಗೆ ಕರೆ ಮಾಡಿ, ವಿಚಾರಿಸಿದಾಗ ಕೊರಗಜ್ಜನ ವೇಷದ ಸ್ಟೇಟಸ್ ಹಾಕಿದ್ದೇನೆ ಏನಾಯ್ತು? ಮುಂದೆಯೂ ಇದಕ್ಕಿಂತ ಹೆಚ್ಚಿನ ಸ್ಟೇಟಸ್ ಹಾಕಿ ಸಂಭ್ರಮಿಸುತ್ತೇನೆ ಎಂದು ಉಡಾಪೆ ಮಾತಾಡಿದ್ದ. ಹೀಗಾಗಿ ಕೊರಗಜ್ಜನಿಗೆ ಅಪಹಾಸ್ಯ ಮಾಡಿ ರವೀಂದ್ರ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿದ್ದಾನೆ ಎಂದು ಚೇತನ್ ಎನ್ನುವವರು ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

22/01/2022 11:53 am

Cinque Terre

11.28 K

Cinque Terre

5

ಸಂಬಂಧಿತ ಸುದ್ದಿ