ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ನಾಪತ್ತೆಯಾಗಿದ್ದ ಶಿಕ್ಷಕಿ ಮೃತದೇಹ ಬಾವಿಯಲ್ಲಿ ಪತ್ತೆ; ಆತ್ಮಹತ್ಯೆ ಶಂಕೆ

ಮನೆಯಿಂದ ನಾಪತ್ತೆಯಾಗಿದ್ದ ಉಳ್ಳಾಲದ ಶಿಕ್ಷಕಿಯೋರ್ವರ ಮೃತದೇಹ ಇಂದು ಮಧ್ಯಾಹ್ನ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಉಳ್ಳಾಲ ಅಬ್ಬಕ್ಕ ಸರ್ಕಲ್ನ ಲಿಟಲ್ ಹಾರ್ಟ್ ಕಿಂಡರ್ ಗಾರ್ಡನ್ ನ ಮಾಲಕಿ ಮತ್ತು ಶಿಕ್ಷಕಿಯಾಗಿರುವ ಹರಿಣಾಕ್ಷಿ ಬಸವರಾಜ್ (51)ಮೃತ ದುರ್ದೈವಿ.

ಹರಿಣಾಕ್ಷಿ ಅವರ ಗಂಡ ಬಸವರಾಜ್ ಅವರು ನ್ಯಾಯವಾದಿಯಾಗಿದ್ದು ಶಿವಮೊಗ್ಗದಲ್ಲಿದ್ದಾರೆ. ಹರಿಣಾಕ್ಷಿ ಅವರು ತನ್ನ ಇಬ್ಬರು ಪುತ್ರರೊಂದಿಗೆ ಅಬ್ಬಕ್ಕ ಸರ್ಕಲ್ ನಲ್ಲಿ ನೆಲೆಸಿದ್ದು ಮನೆಯ ಕಟ್ಟಡದಲ್ಲೇ ನರ್ಸರಿ,ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಹರಿಣಾಕ್ಷಿ ಅವರ ಹಿರಿಯ ಪುತ್ರ ನಿತಿನ್ ರಾಜ್ ಇನ್ಫೋಸಿಸ್ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದು ಕಿರಿಯ ಪುತ್ರ ಅಮಿತ್ ರಾಜ್ ಅಲೋಶಿಯಸ್ ಕಾಲೇಜಲ್ಲಿ ಬಿಬಿಎ ದ್ವಿತೀಯ ವರ್ಷ ವ್ಯಾಸಾಂಗ ಮಾಡ್ತಿದ್ದಾನೆ.

ಹರಿಣಾಕ್ಷಿ ಅವರ ಪುತ್ರರು ಇಂದು ಬೆಳಿಗ್ಗೆ ಎದ್ದಾಗ ತಾಯಿ ಮನೆಯೊಳಗೆ ಇರಲಿಲ್ಲವಂತೆ. ಗಾಬರಿಗೊಂಡ ಮಕ್ಕಳು ತಾಯಿಗಾಗಿ ಹುಡುಕಾಟ ನಡೆಸಿದ್ದು ಕೊನೆಗೆ ಉಳ್ಳಾಲ ಪೊಲೀಸರಿಗೂ ವಿಷಯ ತಿಳಿಸಿದ್ದಾರೆ. ಮಧ್ಯಾಹ್ನದ ವೇಳೆ ಸಮುದಾಯ ಆರೋಗ್ಯ ಕೇಂದ್ರದ ಬಾವಿ ಬಳಿ ಹರಿಣಾಕ್ಷಿ ಅವರು ಧರಿಸುತ್ತಿದ್ದ ಚಪ್ಪಲಿ ದೊರಕಿದೆ. ಕೂಡಲೇ ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಈಜು ರಕ್ಷಕರು ಸೇರಿ ಬಾವಿಯೊಳಗಿದ್ದ ಮೃತದೇಹವನ್ನ ಮೇಲಕ್ಕೆತ್ತಿದ್ದಾರೆ. ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮೃತ ಹರಿಣಾಕ್ಷಿ ಅವರು ಕೊರೋನಾ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಿಗೆ ಜಾತಿ,ಮತ ನೋಡದೆ ಆಹಾರ ಸಾಮಗ್ರಿಗಳನ್ನ ನೀಡಿದ್ದರಂತೆ. ನಿತ್ಯವೂ ಬೆಳಿಗ್ಗೆ ನಸುಕಿನ ವೇಳೆ ಅವರು ವಾಕಿಂಗ್ ಮಾಡ್ತಿದ್ದು ನಿನ್ನೆ ಬೆಳಿಗ್ಗೆನೂ ವಾಕಿಂಗ್ ಗೆ ಹೋಗಿದ್ದರಂತೆ. ನಿನ್ನೆ ಸಂಜೆ ತಲೆನೋವಿಂದ ಸುಸ್ತಾಗಿದ್ದರೆಂದು ಪರಿಚಯಸ್ಥರು ತಿಳಿಸಿದ್ದಾರೆ.

Edited By :
PublicNext

PublicNext

12/08/2022 04:19 pm

Cinque Terre

34.44 K

Cinque Terre

0

ಸಂಬಂಧಿತ ಸುದ್ದಿ