ಬಜಪೆ : ಮೀನು ಹಿಡಿಯಲು ಹೋದ ಇಬ್ಬರಲ್ಲಿ ಓರ್ವ ನೀರು ಪಾಲಾದ ಘಟನೆ ಗುರುಪುರ ಸಮೀಪದ ಕೊಳದಬದಿ ಎಂಬಲ್ಲಿ ಶುಕ್ರವಾರ ಸಂಜೆ ವೇಳೆ ನಡೆದಿದೆ.ಪ್ರವೀಣ್(48) ನೀರು ಪಾಲಾದವರು
ಗುರುಪುರದ ಕೊಟ್ಟಾರಿ ಗುಡ್ಡೆ ನಿವಾಸಿ ಪ್ರವೀಣ್ ತನ್ನ ಸ್ನೇಹಿತ ಜೈಸನ್ ಜತೆಯಲ್ಲಿ ಇಲ್ಲಿನ ಕೊಳದಬದಿ ಎಂಬಲ್ಲಿರುವ ಕೊಳದಲ್ಲಿ ಮೀನು ಹಿಡಿಯಲು ತೆರಳಿದ್ದರು.
ಮೀನಿಗಾಗಿ ಬಲೆ ಹಾಕಿ ಕಾದಿದ್ದರು. ಸ್ವಲ್ಪ ಸಮಯದ ನಂತರ ಬಲೆಯನ್ನು ಮೇಲಕ್ಕೆ ಎತ್ತಿ ಮನೆಯತ್ತ ಹೊರಡಲು ತಯಾರಿ ನಡೆಸಿದ್ದರು. ಪ್ರವೀಣ್ ಅವರು ಕತ್ತಲೆಯಲ್ಲಿ ಪೊದೆಗಳು ತುಂಬಿದ್ದ ಜಾಗದಲ್ಲಿ ಕೆಸರಿಗೆ ಇಳಿದಿದ್ದು, ಸ್ನೇಹಿತ ವಾಪಾಸ್ ಬರದೇ ಹೋದಾಗ ಕೂಗಿದರೂ ಪ್ರತಿಕ್ರಿಯೆ ಬಾರದೆ ಇದ್ದುದನ್ನು ಕಂಡು ಜೈಸನ್ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.ಬಜಪೆ ಪೋಲೀಸರು ಘಟನಾ ಸ್ಥಳಕ್ಕೆಆಗಮಿಸಿದ್ದು, ನಿನ್ನೆ ರಾತ್ರಿ ಮಂಗಳೂರಿನ ಅಗ್ನಿಶಾಮಕ ದಳವು ಕೆಸರಲ್ಲಿ ಹೂತು ಹೋಗಿರುವ ಪ್ರವೀಣ್ ಮೃತದೇಹವನ್ನು ಮೇಲೇತ್ತುವ ಕಾರ್ಯಾಚರಣೆ ನಡೆದಿದೆ. ಪ್ರವೀಣ್ ಅಕಸ್ಮಾತ್ ಕೆಸರಿಗೆ ಜಾರಿದ್ದು ಮೇಲೆ ಬರಲಾರದೇ ಕೆಸರಲ್ಲಿ ಹೂತು ಹೋಗಿರಬಹುದು ಎಂದು ಅಂದಾಜಿಸಲಾಗಿದೆ.
Kshetra Samachara
02/07/2022 01:15 pm