ಕಾರ್ಕಳ : ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಇತಿಹಾಸ ಪ್ರಸಿದ್ಧ ಕಜೆ ಮಾರಿಗುಡಿ ಮಾರಿಯಮ್ಮ ದೇವಸ್ಥಾನದ ಹಿಂಬಂದಿಯ ಬಾಗಿಲು ಮುರಿದ ಯಾರೋ ಕಳ್ಳರು ನಗದು ದೋಚಿಕೊಂಡು ಹೋದ ಘಟನೆ ಸೋಮವಾರ ರಾತ್ರಿ ನಡೆದಿದೆ.
ದೇವಸ್ಥಾನದ ಗರ್ಭಗುಡಿಯ ಬಾಗಿಳು ಮುರಿದು ಜಾಲಾಡಿದ ಕಳ್ಲರು,ಕ್ಯಾಶ್ ಕೌಂಟರಿನಲ್ಲಿದ್ದ ಸುಮಾರು 15000 ನಗದು ದೋಚಿದ್ದಾರೆ. ದೇವರ ಆಭರಣಗಳು ಕೈ ಸಿಗದ ಕಾರಣ ಬಂಗಾರದ ವಸ್ತುಗಳನ್ನು ದೋಚವಲ್ಲಿ ವಿಫಲರಾಗಿದ್ದಾರೆ.
ಕಳವು ಮಾಡಲಯ ದೇವಸ್ಥಾನದ ಸುತ್ತ ಅಳವಡಿಸಿದ ಸಿ ಸಿ ಕ್ಯಾಮೆರಾ ನಾಶಮಾಡಿ ಡಿ.ವಿ.ಅರ್ ಕೊಂಡೊಯ್ದಿದ್ದಾರೆ . ದೇವಸ್ಥಾನದಲ್ಲಿ ಬ್ರಹ್ಮಕಲಶದ ಪೂರ್ವ ತಯಾರಿಯ ಸಂದರ್ಭ ಕಳ್ಳತನಕ್ಕೆ ಯತ್ನ ಮಾಡಿದ್ದು ದೇವಿಯ ಭಕ್ತರಲ್ಲಿ ಆತಂಕ ಉಂಟಾಗಿದೆ. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
22/09/2020 04:31 pm