ಮಂಗಳೂರು: ದಂಪತಿ ಮತ್ತು 8 ವರ್ಷದ ಮಗುವಿನ ಮೇಲೆ ಗೂಂಡಾಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಗರದ ಅತ್ತಾವರದಲ್ಲಿ ನಡೆದಿದೆ.
ಬಡ ಕುಟುಂಬದ ದಂಪತಿಗಳ ಮೇಲೆ ರಾಕ್ಷಸಿ ಕೃತ್ಯ ಎಸಗಿದ ಗೂಂಡಾಗಳು ಮತ್ತು ದಂಪತಿಗಳ ಕೃತ್ಯ ಬೆಳಕಿಗೆ ಬಂದಿದೆ.ವಿಶ್ವನಾಥ ಮತ್ತು ಅಮೃತ ದಂಪತಿ ಸೇರಿ ಮಾನವೀಯತೆ ಮರೆತು ಬಾಡಿಗೆ ಗೂಂಡಾಗಳನ್ನು ತರಿಸಿ ಬಡ ಕುಟುಂಬದ ಹಲ್ಲೆ ನಡೆಸಿದ್ದಾರೆ.ಬಿಪುಲ್ ,ಮಿಥಾರಾಯ್ ಹಾಗೂ ಅವರ ಎಂಟು ವರ್ಷದ ಮಗು ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದಾರೆ.
ವಿಶ್ವನಾಥ ಮತ್ತು ಅಮೃತಾ ದಂಪತಿ, ಆರು ಮಂದಿ ಬಾಡಿಗೆ ಗೂಂಡಾಗಳನ್ನು ತರಿಸಿ, ಕೆಲಸ ಮುಗಿಸಿ ಮನೆಗೆ ವಾಪಸ್ಸು ಆಗ್ತಿದ್ದ ವಿಪುಲ್ ಮೇಲೆ ಹಲ್ಲೆ ನಡೆಸಿದ್ದಾರೆ.ತಡೆಯಲು ಬಂದ ಪತ್ನಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ.8 ವರ್ಷದ ಮಗುವಿನ ಮೇಲೆ ಹೊಡೆಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಹಿಂದೆ ಈ ರೀತಿಯ ಘಟನೆ ನಡೆಯಬಹುದು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ರು ಎನ್ನಲಾಗಿದೆ. ಆದರೆ ಪೊಲೀಸರು ಯಾವುದೇ ಕ್ರಮಜರಗಿಸಲ್ಲ ಎಂಬ ಅರೋಪ ಕೇಳಿಬಂದಿದೆ.ಬಡ ದಂಪತಿಗಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ
ವಿಶ್ವನಾಥ ,ಅಮೃತಾ ದಂಪತಿಗಳ ಮೇಲೆ ಕಠಿಣ ಕಾನೂನು ಕ್ರಮ ಜರಗಿಸಿ ಬಂಧಿಸುವಂತೆ ಒತ್ತಾಯ ಕೇಳಿ ಬಂದಿದೆ.
Kshetra Samachara
07/05/2022 12:31 pm