ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ನಿಯಮ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಸಹಕಾರಿ ಸಂಘದ ಕಟ್ಟಡಕ್ಕೆ ತಡೆಯಾಜ್ಞೆ

ಬೈಂದೂರು: ಸಹಕಾರಿ ಸಂಘಗಳ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಗೋದಾಮು ಹಾಗೂ ಬಹುಮಹಡಿ ಕಟ್ಟಡ(ಮಳಿಗೆ) ಕಾಮಗಾರಿಗೆ ಆರ್‌ಸಿಎಸ್ ತಡೆಯಾಜ್ಞೆ ನೀಡಲಾಗಿದೆ ಎಂದು ಸಂಘದ ನಿರ್ದೇಶಕರಾದ ಬಿ.ಎಸ್.ಸುರೇಶ್ ಶೆಟ್ಟಿ ಹಾಗೂ ಬಿ. ರಘುರಾಮ ಶೆಟ್ಟಿ ತಿಳಿಸಿದ್ದಾರೆ.

ಸಹಕಾರಿ ಸಂಘಗಳ ನಿಯಮದಂತೆ ಕಾರ್ಯಾಚರಿಸುವ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ಉಪ್ಪುಂದದಲ್ಲಿ ಮುಖ್ಯ ಕಚೇರಿಯನ್ನು ಹೊಂದಿದ್ದು, ಎ, ಸಿ ಹಾಗೂ ಡಿ ದರ್ಜೆಯ ಸುಮಾರು 45 ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದೆ.

45 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಸಂಸ್ಥೆಯು ಏಳೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಹೊರಟಿರುವ ಗೋದಾಮು ಹಾಗೂ ಬಹುಮಹಡಿ ಕಟ್ಟಡದ ಬಾಳಿಕೆ, ಗುಣಮಟ್ಟ ಹಾಗೂ ಸಂಸ್ಥೆಗೆ ಹೊರೆಯಾಗಲಿರುವ ಹಣಕಾಸಿನ ಬಗ್ಗೆ ಸಂಸ್ಥೆಯೇ ಜವಾಬ್ಧಾರಿಯಾಗಿರುತ್ತದೆ.

ಈ ಕಾರಣಕ್ಕೆ ಸಂಸ್ಥೆಯ ಎಲ್ಲಾ ಸದಸ್ಯರ ಹಿತದೃಷ್ಟಿಯ ಹಿನ್ನೆಲೆಯಲ್ಲಿ ಸಂಘದ ನಿರ್ದೇಶಕರುಗಳಾದ ಬಿ.ಎಸ್.ಸುರೇಶ್ ಶೆಟ್ಟಿ ಹಾಗೂ ಬಿ. ರಘುರಾಮ ಶೆಟ್ಟಿ ಜಂಟಿಯಾಗಿ ಸಹಕಾರ ಸಂಘಗಳ ನಿಬಂಧಕರ ಕಚೇರಿ ಬೆಂಗಳೂರು ಇವರಿಗೆ ಆಕ್ಷೇಪಣೆ ಸಲ್ಲಿಸಿದ್ದೆವು. ನಾವು ಸಲ್ಲಿಸಿದ್ದ ಆಕ್ಷೇಪಣೆಯನ್ನು ಪರಿಶೀಲಿಸಿದ ರಾಜ್ಯ ಸಹಕಾರ ಸಂಘಗಳ ನಿಬಂಧಕರು ದಿನಾಂಕ: 25-4-2022 ರಂದು ಕಟ್ಟಡ ನಿರ್ಮಾಣ ಕಾಮಗಾರಿ ತಡೆಯಾಜ್ಞೆ ನೀಡಿದೆ. ಇದಲ್ಲದೇ ಸಂಘದಲ್ಲಿ ಇನ್ನೂ ಹಲವಾರು ಅವ್ಯವಹಾರಗಳು ನಡೆದಿದ್ದು, ಈ ಬಗ್ಗೆಯೂ ನಾವು ಆರ್‌ಸಿಎಸ್ ಗೆ ದೂರು ನೀಡಿದ್ದು ತನಿಖೆ ನಡೆಯುತ್ತಿದೆ ಎಂದು ಹೇಳಿದರು.

Edited By : Shivu K
Kshetra Samachara

Kshetra Samachara

04/05/2022 01:46 pm

Cinque Terre

9.22 K

Cinque Terre

0

ಸಂಬಂಧಿತ ಸುದ್ದಿ