ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಜಂಕ್ಷನ್ ಬಳಿ ನಿಲ್ಲಿಸಿದ್ದ ಸೈಕಲನ್ನು ಕಳವು ಮಾಡಿ ಕಾರ್ನಾಡ್ ನಲ್ಲಿ ಮಾರಾಟ ಮಾಡಲು ಯತ್ನಿಸಿದ ಕಳ್ಳನನ್ನು ಹಿಡಿದ ಆಟೋ ಚಾಲಕ ಮುಲ್ಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸೈಕಲ್ ಕಳ್ಳತನದ ಆರೋಪಿಯನ್ನು ಸಸಿಹಿತ್ಲು ಗರೋಡಿ ಬಳಿಯ ನಿವಾಸಿ ಮಂಜುನಾಥ (32) ಎಂದು ಗುರುತಿಸಲಾಗಿದೆ.
ಆರೋಪಿ ಮಂಜುನಾಥ ಹಳೆಯಂಗಡಿ ಜಂಕ್ಷನ್ ಬಳಿಯಿಂದ ಸೈಕಲ್ ಕಳವು ಮಾಡಿ ಮುಲ್ಕಿ ಬಸ್ ನಿಲ್ದಾಣದ ಬಳಿ ಸ್ಥಳೀಯ ಆಟೋ ಚಾಲಕರಿಗೆ ಮಾರಾಟ ಮಾಡಲು ಯತ್ನಿಸಿದ್ದಾನೆ. ಈ ಸಂದರ್ಭ ಆಟೋ ಚಾಲಕರಿಗೆ ಸಂಶಯ ಬಂದು ಆಟೋ ಚಾಲಕ ವಿಲ್ಫ್ರೆಡ್ ಮತ್ತಿತರರು ಆತನನ್ನು ಹಿಂಬಾಲಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಸೈಕಲ್ ಕಳ್ಳನನ್ನು ಹಿಡಿಯಲು ಸಹಕರಿಸಿದ ಮುಲ್ಕಿ ಆಟೋ ಚಾಲಕರಿಗೆ ಪ್ರಸಂಶೆ ವ್ಯಕ್ತವಾಗುತ್ತಿದೆ.
Kshetra Samachara
30/01/2022 10:59 pm