ಉಡುಪಿ: ಸರ್ವಿಸ್ ಬಸ್ ನಿಲ್ದಾಣದ ಬಳಿಯ ಯಾತ್ರಿ ನಿವಾಸದಲ್ಲಿ ನಗರಸಭೆ ನೀಡಿದ ಪರವಾನಿಗೆ ಉಲ್ಲಂಘಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕೇಸ್‌ಗೆ ಸಂಬಂಧಿಸಿ ಆರೋಪಿ ರಮೇಶ್ ಶೆಟ್ಟಿಗೆ ನೋಟಿಸ್ ನೀಡಲಾಗಿದೆ.
ಈ ಲಾಡ್ಜ್ ಅನ್ನು ನಗರಸಭೆಯಿಂದ ರಮೇಶ್ ಶೆಟ್ಟಿ 20 ವರ್ಷಗಳಿಗಾಗಿ ಲೀಸಿಗೆ ಪಡೆದುಕೊಂಡಿದ್ದರು. ಈಗ 12 ವರ್ಷ ಪೂರೈಸಲಾಗಿದೆ. ಸರಕಾರ ಹಾಗೂ ನಗರಸಭೆಗೆ ಸಂಬಂಧಿಸಿದ ಈ ಕಟ್ಟಡದಲ್ಲಿ ನಿರಂತರವಾಗಿ ಅನೈತಿಕ ವ್ಯವಹಾರ ನಡೆಸಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದ್ದರು. ಈ ಬಗ್ಗೆ ಹಲವಾರು ಬಾರಿಗೆ ಎಚ್ಚರಿಕೆ ನೀಡಿದ್ದರೂ ಅನೈತಿಕ ವ್ಯವಹಾರ ಮುಂದುವರಿದಿದ್ದು, ಆದ್ದರಿಂದ ಪರವಾನಿಗೆ ರದ್ದುಪಡಿಸುವಂತೆ ಪೊಲೀಸ್ ಇಲಾಖೆಯು ನಗರಸಭೆಗೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ನೋಟಿಸ್ ಜಾರಿ ಮಾಡಿದೆ.
Kshetra Samachara
30/01/2022 01:53 pm