ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಎನ್‌ಐಎ ದಾಳಿ ಓರ್ವನ ಬಂಧನ

ಮುಲ್ಕಿ: ಬೆಂಗಳೂರಿನ ಕೆ ಜಿ ಹಳ್ಳಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಇಂದ್ರ ನಗರದ ಬಳಿ ವ್ಯಕ್ತಿಯೊಬ್ಬರ ಮನೆಗೆ ಮುಲ್ಕಿ ಪೊಲೀಸರ ಸಹಕಾರದೊಂದಿಗೆ ಎನ್‌ಐಎ ದಾಳಿ ನಡೆಸಿದೆ.

ಬಂಧಿತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಮಯ್ಯದ್ದಿ (42)ಎಂದು ಗುರುತಿಸಲಾಗಿದೆ. ಗುರುವಾರ ನಸುಕಿನ ಜಾವ ಹಳೆಯಂಗಡಿಯ ಇಂದ್ರ ನಗರ ಮೂರನೇ ಕ್ರಾಸ್‌ನಲ್ಲಿರುವ ಆರೋಪಿ ಮಯ್ಯದ್ದಿ ಮನೆಗೆ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದು ಎರಡು ಲ್ಯಾಪ್‌ಟಾಪ್ ಮೊಬೈಲ್ ಹಾಗೂ ಪುಸ್ತಕವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಬಗ್ಗೆ ವಿವರ ಇನ್ನಷ್ಟೇ ತಿಳಿಯಬೇಕಾಗಿದೆ

Edited By : Nagaraj Tulugeri
PublicNext

PublicNext

22/09/2022 12:51 pm

Cinque Terre

17.3 K

Cinque Terre

1

ಸಂಬಂಧಿತ ಸುದ್ದಿ