ಬೈಂದೂರು: ತಾಲೂಕಿನ ಶಿರೂರು ಟೋಲ್ ಗೇಟ್ ಸಮೀಪ ನಿಲ್ಲಿಸಿದ್ದ ಲಾರಿಯ ಟಯರ್ ಕಳವು ಮಾಡಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಶ್ಯಾಮ ಶಂಕರ್ (24) ಆಕಾಶ್ ಬಪ್ಪ ಶಿಂಧೆ (19) ಹಾಗೂ ಅಮೂಲ್ ರಾಮ ಕಳೆ (22) ಬಂಧಿತರು. ಎರಡು ದಿನಗಳ ಹಿಂದೆ ಶೀರೂರು ಟೋಲ್ ಬಳಿ ಲಾರಿಯ ಐದು ಟಯರ್ ಕಳ್ಳತನ ಮಾಡಲಾಗಿತ್ತು. ಮಂಪರು ಬರಿಸುವ ಸ್ಪ್ರೇ ಹೊಡೆದು ಕ್ಷಣಮಾತ್ರದಲ್ಲಿ ಐದು ಟಯರ್‌ಗಳನ್ನು ಕಳ್ಳರು ಕಳವು ಮಾಡಿದ್ದರು. ಅಂಕೋಲಾ ಮೂಲದ ಪುರುಷೋತ್ತಮ್ ಅವರು ತಮ್ಮ ಹೊಸ ಲಾರಿಯನ್ನು ಟೋಲ್ ಬಳಿ ನಿಲ್ಲಿಸಿ ವಿಶ್ರಾಂತಿಗ ಪಡೆಯುತ್ತಿದ್ದರು. ಕಳ್ಳರು ತಡರಾತ್ರಿ ಸ್ಪ್ರೇ ಹೊಡೆದು ತಂಡವು ಟಯರ್ ಕದ್ದು ಪರಾರಿಯಾಗಿತ್ತು. ಸಿಸಿಟಿಟಿ ದೃಶ್ಯಾವಳಿ ಜಾಲಾಡಿದ ಪೊಲೀಸರು
ಬೈಂದೂರು ತಾಲೂಕಿನ ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ 66 ಬಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಗಳಿಂದ ಕಳವು ಮಾಡಿದ 1 ಲಕ್ಷದ 85 ಸಾವಿರ ಮೌಲ್ಯದ ಐದು ಟಯರ್ ಹಾಗೂ ಕೃತ್ಯಕ್ಕೆ ಬಳಸಿದ ಲೈಲಾಂಡ್ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
Kshetra Samachara
18/09/2022 10:13 pm