ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಫಾಝಿಲ್ ಕೊಲೆ ಪ್ರಕರಣ, ತನಿಖೆ ಬಗ್ಗೆ ಕಮಿಷನರ್ ಹೇಳಿದ್ದೇನು?

ಮಂಗಳೂರು:ಮಂಗಳೂರು ನಗರದ ಹೊರವಲಯದ ಸುರತ್ಕಲ್ ನಲ್ಲಿ ಗುರುವಾರ ರಾತ್ರಿ ನಡೆದ ಮುಹಮ್ಮದ್ ಫಾಝಿಲ್ ಎಂಬ ಯುವಕನ‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಬಳಸಿದ್ದ ಕಾರಿನ ಮಾಲೀಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಮಂಗಳೂರಲ್ಲಿ ಮಾಹಿತಿ ನೀಡಿದ ಅವರು, ಕೊಲೆ ನಡೆದ ಪರಿಸರದ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳ ಆಧಾರದಲ್ಲಿ 8 ಬಿಳಿ ಬಣ್ಣದ ಇಯೋನ್ ಕಾರುಗಳನ್ನು ವಶಕ್ಕೆ ಪಡೆದು ಅದರ ಮಾಲೀಕರನ್ನು ವಿಚಾರಣೆ ನಡೆಸಿದ್ದೇವೆ. ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಯಲ್ಲಿ ಕಂಡು ಬಂದ ಕಾರಿನ ನೋಂದಣಿ ಸಂಖ್ಯೆಯನ್ನು ಆಧರಿಸಿ ಆರೋಪಿಗಳು ಬಳಸಿದ ಕಾರಿನ ಮಾಲೀಕನನ್ನು ಸುರತ್ಕಲ್ ಹೊರ ವಲಯದಲ್ಲಿ ಶನಿವಾರ ಸಂಜೆ ವಶಕ್ಕೆ ಪಡೆಯಲಾಗಿದೆ.

ವಶಕ್ಕೆ ಪಡೆದ ವ್ಯಕ್ತಿ ವಿಚಾರಣೆಯ ವೇಳೆ ನೀಡಿರುವ ಮಾಹಿತಿಯನ್ನು ಆಧರಿಸಿ ತನಿಖೆ ಮುಂದುವರಿದಿದೆ. ಆತನಲ್ಲಿ ಇನ್ನೂ ಒಂದಿಷ್ಟು ಪ್ರಶ್ನೆಗಳನ್ನು ಕೇಳಲಾಗುವುದು. ಇದರಿಂದ ಕೊಲೆ ಆರೋಪಿಗಳ ಬಗ್ಗೆ ಇನ್ನಷ್ಟು ಮಾಹಿತಿ ಸಿಗಲಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಶಕ್ಕೆ ಪಡೆಯಲಾಗುವುದು. ಈಗಾಗಲೇ ಆತ ನೀಡಿರುವ ಮಾಹಿತಿಯನ್ನು ಆಧರಿಸಿ ಕೊಲೆ ಆರೋಪಿಗಳ ಬಂಧಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

Edited By : Somashekar
Kshetra Samachara

Kshetra Samachara

31/07/2022 02:25 pm

Cinque Terre

12.49 K

Cinque Terre

4

ಸಂಬಂಧಿತ ಸುದ್ದಿ