ಮಂಗಳೂರು: ನಗರದ ಸುರತ್ಕಲ್ ನ ಮಂಗಳಪೇಟೆ ನಿವಾಸಿ ಫಾಜಿಲ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಬೇಟೆ ಆರಂಭಿಸಿದ್ದು, ಕಾರು ಚಾಲಕನ ಬಂಧನ ಮಾಡಿದ್ದಾರೆ.
ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಫಾಝಿಲ್ ನನ್ನು ಹತ್ಯೆ ಮಾಡಲು ಬಳಸಿರುವ ಕಾರನ್ನು ಈತನೇ ಚಲಾಯಿಸುತ್ತಿದ್ದ ಎಂಬ ಆಧಾರದ ಮೇಲೆ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಜುಲೈ 28 ರ ರಾತ್ರಿ ಸುರತ್ಕಲ್ ನ ಬಟ್ಟೆ ಅಂಗಡಿ ಮುಂಭಾಗ ನಡೆದಿದ್ದ ಭೀಕರ ಹತ್ಯೆಯ ಬಳಿಕ ಹಂತಕರನ್ನು ಕರೆದೊಯ್ದು ಎಸ್ಕೇಪ್ ಆಗಿದ್ದ ಆರೋಪಿ. ಸ್ಪಾಟ್ ಗೆ ಬಂದಿದ್ದ ಕಾರನ್ನು ಗುರುತಿಸಿದ್ದ ಪೊಲೀಸರು ಇಯಾನ್ ಕಾರು ಮಾಲಕರನ್ನು ಕರೆಸಿ ವಿಚಾರಣೆ ನಡೆಸಿದ ವೇಳೆ ಅನುಮಾನ ಮೂಡಿದೆ.
ತಕ್ಷಣ ಆರೋಪಿ ಇಯಾನ್ ಕಾರು ಮಾಲೀಕನನ್ನು ನಿನ್ನೆ ರಾತ್ರಿ ವಶಕ್ಕೆ ಪಡೆದಿದ್ದಾರೆ. ಕಾರು ಚಾಲಕನ ಹೇಳಿಕೆಯನ್ನು ಆಧರಿಸಿ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ನಾಲ್ಕು ತಂಡ ಮಾಡಿಕೊಂಡು ಉಳಿದ ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ.
Kshetra Samachara
31/07/2022 09:54 am