ಮಂಗಳೂರು: ಬಂಟ್ವಾಳ ತಾಲೂಕಿನ ಬಾಳೆಪುಣಿ, ಕೈರಂಗಳ, ಪಜೀರು ಕಡೆ ಅಕ್ರಮ ಕಲ್ಲು ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಂಪು ಕಲ್ಲು ಗಣಿಗಾರಿಕೆ ನಡೆಸುವ ಜಾಗ ಅದು ಸರಕಾರಿ ಜಾಗ. ಈ ಹಿಂದೆ ಸರಕಾರ ನಿವೇಶನಕ್ಕಾಗಿ ಮಂಜೂರು ಮಾಡಲಾಗಿತ್ತು. ನಿವೇಶನಕ್ಕೆ ಯೋಗ್ಯವಲ್ಲ ಎಂದು ಆ ಜಾಗದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಗಣಿ ಇಲಾಖೆ ಅನುಮತಿ ಮೇರೆಗೆ ಗಣಿಗಾರಿಕೆ ನಡೆಸಲಾಗಿದೆ ಎಂದು ಉತ್ತರ ಬಂದಿದೆ. ಡಿ.ಡಿ. ಮೈನ್ಸ್ ಅಧಿಕಾರಿಗಳ ಜೊತೆ ಸೇರಿ ನಾನು ತನಿಖೆ ನಡೆಸುವೆ ಎಂದರು.
ಇನ್ನು ನಿಜವಾಗಿಯೂ ನಿವೇಶನಕ್ಕೆ ಯೋಗ್ಯವಾದ ಜಾಗನಾ ಎಂಬುದರ ಬಗ್ಗೆ ತನಿಖೆಯಾಗಲಿದೆ. ಆ ಜಾಗದಲ್ಲಿ ಖನಿಜ ವಸ್ತುಗಳ ಪತ್ತೆಯಾಗಿವೆ ಇಲ್ಲವೋ ಎಂಬುದರ ಬಗ್ಗೆ ತಾಂತ್ರಿಕ ವರದಿಗಳ ಪರಿಶೀಲನೆ ಮಾಡಲಾಗಿದೆ. ತಾಂತ್ರಿಕ ವರದಿಗಳಲ್ಲಿ ಯಾವುದನ್ನೂ ದಾಖಲು ಮಾಡಿಲ್ಲ. ಅಭಿವೃದ್ಧಿ ಅಧಿಕಾರಿಗಳು ಅಥವಾ ಗ್ರಾಮ ಲೆಕ್ಕ ಅಧಿಕಾರಿ ಇದರಲ್ಲಿ ಭಾಗಿಯಾಗಿದ್ರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
Kshetra Samachara
21/11/2020 04:29 pm