ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿಯಲ್ಲಿ ಮಹಿಳೆಯೋರ್ವರು ಎರಡು ಮಕ್ಕಳೊಂದಿಗೆ ಕಿನಿಗೋಳಿಯಲ್ಲಿ ಪತ್ತೆಯಾಗಿದ್ದು ಸ್ಥಳೀಯರು ಆತಂಕಗೊಂಡು ಕೂಡಲೇ ಪ್ರಜ್ಜಾ ಸಲಹಾ ಕೇಂದ್ರ ಕಿನ್ನಿಗೋಳಿ ಮತ್ತು ಮುಲ್ಕಿ ಪೋಲಿಸರಿಗೆ ಮಾಹಿತಿ ನೀಡಿದ್ದರು
ಸ್ಥಳಕ್ಕೆ ಆಗಮಿಸಿದ ಪೋಲಿಸರು ಮತ್ತು ಪ್ರಜ್ಜಾ ಸಲಹಾ ಕೇಂದ್ರದ ಸದಸ್ಯರು ವಿಚಾರಿಸಿದಾಗ ಮಹಿಳೆ ಬಾಗಲಕೋಟೆಯ ಮುಧೋಳದವರು ಎಂದು ತಿಳಿದು ಬಂದಿದೆ. ತನ್ನ ಗಂಡ ಅರುಣ್ ನಾಪತ್ತೆಯಾಗಿದ್ದು ಅವರನ್ನು ಹುಡುಕುತ್ತಾ ಮಕ್ಕಳೊಂದಿಗೆ ಬಂದಿದ್ದೇನೆ ಎಂದಿದ್ದಾರೆ. ಮಹಿಳೆ ಅರ್ಥಿಕವಾಗಿ ಹಿಂದುಳಿದಿದ್ದಾರೆ, ತನ್ನ ಊರಿಗೆ ಹಿಂದುರಿಗಲು ಹಣವಿಲ್ಲದೆ ಪರದಾಡುತ್ತಿದ್ದು ಕಿನ್ನಿಗೋಳಿಯ ಸಾರ್ವಜನಿಕರು, ಪ್ರಜ್ಞಾ ಸಲಹಾ ಕೇಂದ್ರದವರು ಹಣ ನೀಡಿ ಸಾಮಾಜಿಕ ಕಾರ್ಯಕರ್ತೆ ಪದ್ಮಿನಿ ವಸಂತ್ ಸಹಕಾರದೊಂದಿಗೆ ಊರಿಗೆ ವಾಪಾಸಾಗಿದ್ದಾರೆ.
Kshetra Samachara
12/02/2022 10:58 pm