ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ : ಪ್ರಸಕ್ತ ವಿದ್ಯಮಾನ ಸೈಬರ್ ಕ್ರೈಂ ಬಗ್ಗೆ ಜನರಾಗಬೇಕಿದೆ ಜಾಗೃತಿ

ಬ್ರಹ್ಮಾವರ : ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗದ ತರಭೇತಿ ಪಡೆದ 3 ವಿಭಾಗದ ವಿದ್ಯಾರ್ಥಿಗಳ ತಂಡದ ಸಮಾರೋಪ ಸಮಾರಂಭ ಗುರುವಾರ ಜರುಗಿತು.

ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಉಡುಪಿ ಪೋಲೀಸ್ ಸೆನ್ ವಿಭಾಗದ ಇನ್ಸಪ್ಟೇಕ್ಟರ್ ಮಂಜುನಾಥ್ ಸೈಬರ್ ಕ್ರೈಂ ಕುರಿತು ಮಾತನಾಡಿ ಇಂದು ಮೊಬೈಲ್ ಮೂಲಕ ಅಪರಿಚಿತರಿಂದ ಬರುವ ಸಂದೇಶ ಅತಿ ಅಪಾಯಕಾರಿಯಾಗಿದೆ.

ಉದ್ಯೋಗ, ಹಣ, ಲವ್ ಮುಂತಾದ ಅನೇಕ ವಿಷಯದಲ್ಲಿ ಜನರನ್ನು ನಂಬಿಸಿ ಮೋಸ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಯಾವುದೇ ಕಾರಣಕ್ಕೂ ಅನಗತ್ಯ ಸಂದೇಶಕ್ಕೆ ಸ್ಪಂದಿಸದೆ ಜಾಗೃತರಾಗಿ ಎಂದರು.

ಬ್ರಹ್ಮಾವರ ಪೋಲೀಸ್ ಠಾಣೆಯ ಮಹಿಳಾ ಪಿ.ಎಸ್.ಐ ಮುಕ್ತಾಬಾಯಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಲಕ್ಷ್ಮೀಶ, ಸಂತೋಷ್ ಶೆಟ್ಟಿ, ಕರುಣಾಕರ ಜೈನ್, ಪತ್ರಕರ್ತರ ಸಂಘದ ರಾಜೇಶ್ ಗಾಣಿಗ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

16/09/2022 02:05 pm

Cinque Terre

10.22 K

Cinque Terre

0

ಸಂಬಂಧಿತ ಸುದ್ದಿ