ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಪಾನ್ ಸ್ಟಾಲ್ ಗೆ ಕಳ್ಳರ ಲಗ್ಗೆ; ನಗದು ಸಹಿತ ಸೊತ್ತು ಕಳವು

ಮುಲ್ಕಿ: ಮುಲ್ಕಿ ಬಸ್ ನಿಲ್ದಾಣ ಹಿಂಭಾಗದ ಭಾರತ್ ಬ್ಯಾಂಕ್ ಬಳಿಯ ಪಾನ್ ಸ್ಟಾಲ್ ಗೆ ನುಗ್ಗಿದ ಕಳ್ಳರು ನಗದು ಸಹಿತ ಸೊತ್ತು ಕಳವು ಮಾಡಿದ್ದಾರೆ.

ಉತ್ತರ ಭಾರತ ಮೂಲದ ಶಿವಶಂಕರ್ ಎಂಬವರ ಪಾನ್ ಸ್ಟಾಲ್ ನ ಬೀಗ ಮುರಿದು ಸುಮಾರು 20 ಸಾವಿರ ಮೌಲ್ಯದ ಸಿಗರೇಟು, ತಂಬಾಕು, ಪಾನ್ ಪರಾಗ್ ಗುಟ್ಕಾ ಹಾಗೂ ಒಳಗಡೆ ಇಟ್ಟಿದ್ದ 300 ರೂ. ದೋಚಿದ್ದಾರೆ.

ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ಪರಿಸರದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಖದೀಮನೊಬ್ಬನನ್ನು ಸ್ಥಳೀಯರ ಸಹಕಾರದೊಂದಿಗೆ ಪೊಲೀಸರು ಬಂಧಿಸಿದ್ದರು.

ಈ ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ಮತ್ತೆ ಮುಲ್ಕಿ ಬಸ್ಸು ನಿಲ್ದಾಣದ ಹೃದಯಭಾಗದಲ್ಲಿ ಮತ್ತೆ ಕಳ್ಳತನ ನಡೆದಿರುವುದು ಸ್ಥಳೀಯರನ್ನು ಕಂಗೆಡಿಸಿದೆ.

Edited By : Manjunath H D
Kshetra Samachara

Kshetra Samachara

24/12/2020 03:33 pm

Cinque Terre

21.41 K

Cinque Terre

2

ಸಂಬಂಧಿತ ಸುದ್ದಿ