ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಕೃಷ್ಣಾಪುರದಲ್ಲಿ ಮಹಿಳೆಯ 3 ಪವನ್ ಚಿನ್ನದ ಸರ ಎಗರಿಸಿ ಇಬ್ಬರು ಪರಾರಿ

ಮುಲ್ಕಿ: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 5ನೇ ವಿಭಾಗದಲ್ಲಿ ಬಿಳಿ ಬಣ್ಣದ ಬೈಕಿನಲ್ಲಿ ಬಂದ ಇಬ್ಬರು ಖದೀಮರು, ಲೀಲಾವತಿ ಎಂಬ ಮಹಿಳೆಯ 3 ಪವನ್ ಚಿನ್ನದ ಸರ ಎಳೆದು ಪರಾರಿಯಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಕಳ್ಳರು ಸರ ಎಳೆಯುವಾಗ ಮಹಿಳೆಯ ಕುತ್ತಿಗೆಗೆ ಗಾಯವಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಹಿಳೆಯ ಅಸಹಾಯಕ ಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳಕ್ಕೆ ಸುರತ್ಕಲ್ ಠಾಣಾಧಿಕಾರಿ ಚಂದ್ರಪ್ಪ, ಸಿಬಂದಿ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.

Edited By :
Kshetra Samachara

Kshetra Samachara

18/12/2020 10:05 pm

Cinque Terre

34.93 K

Cinque Terre

1

ಸಂಬಂಧಿತ ಸುದ್ದಿ