ಬೆಳ್ತಂಗಡಿ: ಉಜಿರೆ ನಿವಾಸಿ ಎಂಟು ವರ್ಷದ ಮಗುವಿನ ಅಪಹರಣ ಪ್ರಕರಣ ಆತಂಕ ಮೂಡಿಸಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆ ಇನ್ನಷ್ಟು ಚುರುಕಾಗಿದೆ. ಅಪಹರಣ ಪ್ರಕರಣ ಬೇಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಎಸ್ ಪಿ ಲಕ್ಷ್ಮೀಪ್ರಸಾದ್ ಹೇಳಿದರು.
ಅಪಹರಣಕ್ಕೆ ಒಳಗಾದ ಬಾಲಕನ ಕುಟುಂಬಸ್ಥರನ್ನು ಭೇಟಿಯಾದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಪ್ರಕರಣದ ತನಿಖೆಗಾಗಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ಅಪಹರಣಕಾರರು ಬಿಟ್ ಕಾಯಿನ್ ಯಾಕೆ ಕೇಳುತ್ತಿದ್ದಾರೆ ಎಂಬ ಕುರಿತು ತನಿಖೆ ಮುಂದುವರೆಸಲಾಗಿದೆ. ಆರೋಪಿಗಳು ಮನೆಮಂದಿಯ ಬಗ್ಗೆ ಬಲ್ಲವರೇ ಆಗಿರುವ ಸಾಧ್ಯತೆ ಕುರಿತು ಅನುಮಾನವಿದೆ ಎಂದರು.
Kshetra Samachara
18/12/2020 01:25 pm