ಮಂಗಳೂರು: ರಸ್ತೆ ಬದಿ ದನದ ಕಿವಿಯ ಭಾಗ ಹಾಗೂ ಪ್ಲಾಸ್ಟಿಕ್ ಚೀಲದಲ್ಲಿ ದನದ ಮಾಂಸ ಪುತ್ತೂರಿನ ಕೊಡಿಪ್ಪಾಡಿ ಬಳಿ ಪತ್ತೆಯಾಗಿದೆ.
ಸ್ಥಳಕ್ಕೆ ಪುತ್ತೂರು ಎಸ್ ಐ ಜಂಬೂರಾಜ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ, ನಡೆಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ತಪ್ಪಿತಸ್ಥರನ್ನು ತಕ್ಷಣ ಬಂಧಿಸದೇ ಹೋದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದರು.
ರಾಜ್ಯ ಸರಕಾರ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದು, ಗೋ ಭಕ್ಷಕರಿಗೆ ಕಾನೂನಿನ ಭಯವಿಲ್ಲದೇ ಈ ರೀತಿಯ ಕುಕೃತ್ಯಗಳು ಮರುಕಳಿಸುತ್ತಿದೆ.
ಇಂತಹ ಘಟನೆ ಮತ್ತೆ ಮತ್ತೆ ಮುಂದುವರಿದರೆ ವಿಎಚ್ ಪಿ ತೀಕ್ಷ್ಣವಾದ ಉತ್ತರ ನೀಡುತ್ತದೆ ಎಂದರು.
Kshetra Samachara
11/12/2020 10:49 pm