ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಉಗ್ರ ಪರ ಗೋಡೆ ಬರಹಕ್ಕೆ ವಿದೇಶದಿಂದ ಹಣ?

ಮಂಗಳೂರು: ಮಂಗಳೂರಿನಲ್ಲಿ ಉಗ್ರ ಗೋಡೆ ಬರಹ ಪ್ರಕರಣದಲ್ಲಿ ಆರೋಪಿಗಳಿಗೆ ವಿದೇಶದಿಂದ ಹಣ ಬಂದಿರುವ ಬಗ್ಗೆ ಪೊಲೀಸರಿಗೆ ಸುಳಿವು ಲಭಿಸಿದೆ. ಈ ಹಣಕಾಸು ನೆರವಿನ ಮೂಲ ಯಾವುದು? ಉಗ್ರ ಗೋಡೆ ಬರಹಕ್ಕೆ ಪ್ರಚೋದನೆ ನೀಡಿದವರು ಯಾರು ಎನ್ನುವ ಕುರಿತು ಇದೀಗ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಕರಣದಲ್ಲಿ ಆರೋಪಿ ತೀರ್ಥಹಳ್ಳಿಯ ಮೊಹಮ್ಮದ್‌ ಶಾರೀಕ್‌(22), ಮಾಝ್‌ ಮುನೀರ್‌(21) ಎಂಬಾತನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಈ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಪ್ರಮುಖ ಆರೋಪಿ ಶಾರೀಕ್‌ಗೆ ವಿದೇಶಿ ಉಗ್ರ ಸಂಘಟನೆಗಳ ಜೊತೆ ನಂಟು ಇರುವುದರಿಂದ ಹಣಕಾಸು ನೆರವನ್ನು ಯಾರು, ಯಾಕಾಗಿ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎನ್ನಲಾಗಿದೆ. ಶಾರೀಕ್‌ಗೆ ವಿದೇಶಿ ಉಗ್ರ ಸಂಘಟನೆಗಳ ನಂಟು ಪ್ರಾಥಮಿಕ ವಿಚಾರಣೆಯಿಂದಲೇ ತಿಳಿದುಬಂದಿತ್ತು. ಆತನಿಗೆ ವಿದೇಶದಿಂದ ವ್ಯಕ್ತಿಯೊಬ್ಬ ಕರೆ ಮಾಡಿರುವ ವಿಚಾರವೂ ತನಿಖಾ ತಂಡದ ಅರಿವಿಗೆ ಬಂದಿತ್ತು.

ಉಗ್ರ ಗೋಡೆ ಬರಹ ಪ್ರಕರಣದಲ್ಲಿ ನಿಷೇಧಿತ ಮತೀಯ ಸಂಘಟನೆಯ ನಂಟಿದೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ. ಎರಡು ವರ್ಷದ ಹಿಂದೆ ಮಂಗಳೂರಿನಲ್ಲಿ ನಿಷೇಧಿತ ಸಂಘಟನೆ ಸದಸ್ಯರು ದಿಢೀರ್‌ ಪ್ರತಿಭಟನೆ ನಡೆಸಿದಾಗ ಪೊಲೀಸರು ಲಾಠಿ ಚಾರ್ಜ್‌ ನಡೆಸಿ ಚದುರಿಸಿದ್ದರು. ಬಳಿಕ ಇದಕ್ಕೆ ಪ್ರತಿಕಾರ ಎಂಬಂತೆ ಲೇಡಿಹಿಲ್‌ ಬಳಿ ಇದೇ ಸಂಘಟನೆಯಿಂದ ಎಎಸ್‌ಐ ಕೊಲೆ ಯತ್ನ ನಡೆದಿತ್ತು.

Edited By : Nagaraj Tulugeri
Kshetra Samachara

Kshetra Samachara

11/12/2020 03:21 pm

Cinque Terre

27.67 K

Cinque Terre

5

ಸಂಬಂಧಿತ ಸುದ್ದಿ