ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬರ್ಬರವಾಗಿ ಕೊಲೆಯಾದ ರೌಡಿಶೀಟರ್

ಮಂಗಳೂರು: ರೌಡಿಶೀಟರ್‌ ಓರ್ವನನ್ನು ಭೀಕರವಾಗಿ ಕೊಂದು ಹಾಕಿದ ಘಟನೆ ಮಂಗಳೂರಿನ ಬೊಕ್ಕಪಟ್ಟಣದ ಕರ್ನಲ್‌ ಗಾರ್ಡನ್‌ ಒಳಗಡೆ ನಡೆದಿದೆ.

ಬೊಕ್ಕ ಪಟ್ಟಣ ನಿವಾಸಿ ಇಂದ್ರಜೀತ್‌ (45), ಹತ್ಯೆಯಾದ ವ್ಯಕ್ತಿ. ಈತ ಪಾಂಡೇಶ್ವರ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್‌ ಆಗಿದ್ದ ಎಂದು ತಿಳಿದು ಬಂದಿದೆ.

ನಿನ್ನೆ ತಡರಾತ್ರಿ ವೇಳೆ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ. ಬುಧವಾರ ರಾತ್ರಿ ಈತನು ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು ಅಲ್ಲಿ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದೆ ಎಂಬ ಮಾಹಿತಿ‌ ಇದೆ.

Edited By : Nagesh Gaonkar
Kshetra Samachara

Kshetra Samachara

26/11/2020 10:27 am

Cinque Terre

44.59 K

Cinque Terre

0

ಸಂಬಂಧಿತ ಸುದ್ದಿ