ಉಡುಪಿ- ನಕಲಿ ದಂತ ವೈದ್ಯೆಯೊಬ್ಬರು ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದಾರೆಂಬ ಆರೋಪದ ಹಿನ್ನೆಲೆ ಆರೋಗ್ಯಾಧಿಕಾರಿಗಳು ಕ್ಲಿನಿಕ್ ಲ್ಯಾಬ್ ಸೀಲ್ ಮಾಡಿದ್ದಾರೆ.
ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿ ನಿಯಮ 2007ರ ಅಡಿಯಲ್ಲಿ ಉಡುಪಿ ಸಿಟಿ ನಿಲ್ದಾಣದಲ್ಲಿ ಶ್ವೇತಾ ಎಂಬುವವರಿಗೆ ಶಾಶ್ವತ್ ಡೆಂಟಲ್ ಕ್ಲಿನಿಕ್ ಲ್ಯಾಬ್ ಹೆಸರಿನ ವೈದ್ಯಕೀಯ ಸಂಸ್ಥೆಯನ್ನು ನಡೆಸಲು ಅನುಮತಿ ನೀಡಲಾಗಿತ್ತು. ಆದರೆ, ಶ್ವೇತಾ ಅವರು ಕ್ಲಿನಿಕ್ ನಡೆಸುವ ಬದಲು ವೈದ್ಯಕೀಯ ಪದವಿ ಹೊಂದಿಲ್ಲದ ರಾಧಾ ಗೋವಿಂದ ಭಂಡಾರಿ ಎನ್ನುವವರಿಗೆ ಕ್ಲಿನಿಕ್ ನಿರ್ವಹಿಸಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಲಿನಿಕ್ ಮೇಲೆ ದಾಳಿ ನಡೆಸಿದ್ದಾರೆ. ಆರೋಪಿಗಳು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ ಎಂದು ಉಡುಪಿ ಜಿಲ್ಲಾ ತಾಲೂಕು ಆರೋಗ್ಯ ಅಧಿಕಾರಿ ಡಾ.ನಾಗರತ್ನ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
05/11/2020 02:16 pm