ಮಣಿಪಾಲ : ಬ್ರಹ್ಮಾವರದಿಂದ ಮಣಿಪಾಲಕ್ಕೆ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಬಂದಿರುವ ವ್ಯಕ್ತಿಯೋರ್ವನ ಬಗ್ಗೆ ಖಚಿತ ಮಾಹಿತಿ ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮಹಮ್ಮದ್ ಫಜಲ್ ಬಂಧಿತ ಆರೋಪಿ.
ವಿಚಾರಣೆ ವೇಳೆ ತನ್ನ ಹೆಸರು ಮಹಮ್ಮದ್ ಫಜಲ್ ಎಂದು ತಿಳಿಸಿದ್ದಾನೆ. ತಾನು ಹಾಗೂ ತನ್ನ ಸ್ನೇಹಿತರಾದ ಉಡುಪಿಯ ಫರ್ಹಾನ್ ಮತ್ತು ಸಫಾ ಮೂವರು ಸೇರಿ ಕೆಲವು ಡ್ರಗ್ಸ್ ಮಾತ್ರೆ ಹಾಗೂ ಬ್ರೌನ್ ಶುಗರ್ ಅನ್ನು ಆನ್ ಲೈನ್ ನಲ್ಲಿ ಆರ್ಡರ್ ನೀಡಿ ತನ್ನ ವಿಳಾಸಕ್ಕೆ ತರಿಸಿದ್ದು, ಅವುಗಳನ್ನು ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿರುವುದಾಗಿ, ತಾನು ಫರಾನ್ ಹಾಗೂ ಸಫಾಳಿಗೆ ಕಾಯುತ್ತಿರುವುದಾಗಿ ತಿಳಿಸಿದ್ದಾನೆ.
ಆರೋಪಿಯ ಬಳಿಯಿದ್ದ 2 ಮೊಬೈಲ್ ಪೋನ್, ಅಂದಾಜು 4,63,600 ರೂ.ಮೌಲ್ಯದ 54 ನಿಷೇಧಿತ ಎಂಡಿಎಂಎ ಎಕ್ಸ್ಟಾಸೆ ಮಾತ್ರೆಗಳು, 30 ಗ್ರಾಂ ಬ್ರೌನ್ ಶುಗರ್, ಚುನಾವಣಾ ಗುರುತು ಚೀಟಿ, 2 ಡೆಬಿಟ್ ಕಾರ್ಡ್ ಹಾಗೂ ಇಂಟಿಮೇಶನ್ಸ್ಲಿಪ್ ನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
15/10/2020 04:19 pm