ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿಯ ಮನೆಯೊಂದರಿಂದ ಲಕ್ಷಾಂತರ ಮೌಲ್ಯದ ನಗ ನಗದು ಕಳ್ಳತನವಾಗಿರುವ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಲ್ಕಿ ಬಸ್ಸುನಿಲ್ದಾಣದ ಪೆಟ್ರೋಲ್ ಬಂಕ್ ಬಳಿಯ ನಿವಾಸಿ ಸೋಮಸುಂದರ ಅಂಚನ್ ಎಂಬವರು ಅಕ್ಟೋಬರ್ ಎರಡನೇ ತಾರೀಖಿನಂದು ಮಂಗಳೂರಿನಲ್ಲಿ ನಲ್ಲಿರುವ ತನ್ನ ಮಗ ನ ಮನೆಗೆ ಹೋಗಿದ್ದು ಅಲ್ಲಿ ವಾಸ್ತವ್ಯವಿದ್ದರು. ಅಕ್ಟೋಬರ್ 9ನೇ ತಾರೀಕಿಗೆ ನೆರೆಮನೆಯವರು ಸೋಮ ಸುಂದರ್ ಅಂಚನ್ ರವರಿಗೆ ದೂರವಾಣಿ ಮುಖಾಂತರ ಮನೆಯಲ್ಲಿ ಕಳವು ನಡೆದಿದೆ ಎಂದು ತಿಳಿಸಿದ್ದು ಕೂಡಲೇ ಬಂದು ನೋಡಿದಾಗ ಕಳವಿನ ಪ್ರಕರಣ ಬಯಲಿಗೆ ಬಂದಿದೆ.
ಕಳ್ಳರು ಎದುರಿನ ಬಾಗಿಲಿನ ಚಿಲಕವನ್ನು ಭಾರವಾದ ಸಾಧನೆಯಿಂದ ತುಂಡರಿಸಿ ಒಳಗೆ ಹೋಗಿದ್ದು. ದೇವರ ದೀಪಕ್ಕೆ ಎಣ್ಣೆ ಹಾಕಿ ದೀಪದ ಬೆಳಕಿನಲ್ಲಿ ಮನೆಯೊಳಗೆ ಎಲ್ಲಾ ಕೋಣೆಗಳನ್ನು ಜಾಲಾಡಿದ್ದು ಮೂರು ಕಪಾಟುಗಳನ್ನು ಭಾರವಾದ ಸಾಧನದಿಂದ ತುಂಡರಿಸಿ ಕಳವು ಮಾಡಿದ್ದಾರೆ. ಮನೆಯಿಂದ ಸುಮಾರು 3 ವಾಚ್, ಕ್ಯಾಮರಾ, ಬೆಳ್ಳಿಯ ಕಾಯಿನ್, ಸುಮಾರು 9000 ಚಿಲ್ಲರೆ ಹಣ, ಚಿನ್ನದ ಉಂಗುರ, ಎರಡು ಚಿನ್ನದ ಬಳೆ ಕಳವು ಮಾಡಲಾಗಿದೆ ಎಂದು ಸೋಮಸುಂದರ ಅಂಚನ್ ಪೋಲಿಸಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಎಂದು ನೋಡಿಕೊಂಡು ಕಳ್ಳರು ಈ ಕೃತ್ಯ ಎಸಗಿದ್ದಾರೆ. ಮನೆಯ ಬೀಗದ ಲಾಕನ್ನು ತೋಟದ ಹೊರಗಡೆ ಬಿಸಾಡಿದ್ದಾರೆ. ಸೋಮಸುಂದರ ಅಂಚನ್ ಮಂಗಳೂರಿಗೆ ಮಗನ ಮನೆಗೆ ತೆರಳುತ್ತಿರುವ ವೇಳೆಯಲ್ಲಿ ಮನೆಯ ಹೂದೋಟವನ್ನು ನೋಡಲು ಕೆಲಸದವರಿಗೆ ತಿಳಿಸಿದ್ದು ಕೆಲಸದವಳು ಗಿಡಕ್ಕೆ ನೀರು ಹಾಕಲು ಬಂದು ನೋಡುತ್ತಿರುವಾಗ ಮನೆಯ ಬಾಗಿಲು ತೆರೆದಿರುವುದನ್ನು ಕಂಡು ಸಂಶಯಗೊಂಡು ನೆರೆಮನೆಯೊಳಗೆ ತಿಳಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.
ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಲ್ಕಿ ಪೊಲೀಸರ ವಿರುದ್ಧ ಆಕ್ರೋಶ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲ ತಿಂಗಳಿನಿಂದ ಕೆಲವು ಕಳ್ಳತನ ಪ್ರಕರಣ ನಡೆದಿದ್ದರೂ ಇದುವರೆಗೂ ಕಳ್ಳರ ಪತ್ತೆಯಾಗಿಲ್ಲ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಇನ್ನೂ ಹಾಕಿಲ್ಲ . ಕಳ್ಳತನ ನಡೆದ ಮೇಲೆ ಪೊಲೀಸರು ಬಂದು ಹೋಗುವುದು ಮಾಮೂಲಿಯಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
10/10/2020 07:52 pm