ಮಂಗಳೂರು: ವ್ಯಕ್ತಿಯೊಬ್ಬರು ಕಾರಿನಲ್ಲಿ ಬೆಳಗ್ಗೆ ಹೋಗುತ್ತಿದ್ದಾಗ ಅಪರಿಚಿತರು ಗುಂಡಿನ ದಾಳಿ ನಡೆಸಿದ ಘಟನೆ ಸುಳ್ಯದ ಶಾಂತಿನಗರ ಎಂಬಲ್ಲಿ ನಡೆದಿದೆ.
ಗುಂಡು ತಾಗಿರುವ ವ್ಯಕ್ತಿ ಸಂಪತ್ ಕುಮಾರ್ (35) ಎಂದು ತಿಳಿದುಬಂದಿದ್ದು, ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಮೃತಪಟ್ಟಿದ್ದಾರೆ.
ಬೆಳಗ್ಗೆ 6 ಗಂಟೆ ಸುಮಾರಿಗೆ ಸಂಪತ್ ಅವರು ಮನೆಯಿಂದ ಹೊರಡುವ ವೇಳೆ ಅಪರಿಚಿತರು ಕಾರಿನ ಮೇಲೆ ದಾಳಿ ನಡೆಸಿದ್ದರು.
ಈ ಸಂದರ್ಭ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದಿದೆ. ನಂತರವೂ ಗುಂಡಿನ ಸದ್ದು ಕೇಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
Kshetra Samachara
08/10/2020 10:23 am