ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟ ರಮೇಶ್ ಅರವಿಂದ್ ಯಕ್ಷಾವತಾರ ಫೋಟೋಶೂಟ್ ಗೆ ಯಕ್ಷಪ್ರೇಮಿಗಳು ಫಿದಾ!

ಉಡುಪಿ: ಛಾಯಾಗ್ರಹಣದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಫೋಕಸ್ ರಾಘು ನಟ ರಮೇಶ್ ಅರವಿಂದ್ ಅವರಿಗೆ ಕರಾವಳಿಯ ಶೈಲಿಯಲ್ಲೇ ಫೋಟೋ ತೆಗೆಸಿದ್ದಾರೆ. ಯಕ್ಷಗಾನದ ಬಣ್ಣ ಹಚ್ಚಿ, ಗೆಜ್ಜೆ ತೊಟ್ಟು, ಹೆಜ್ಜೆ ಹಾಕಿದ ಪರಿಯಂತೂ ರೋಮಾಂಚನಕಾರಿ. ಕೆಲವು ದಿನಗಳಿಂದ ಉಡುಪಿಯಲ್ಲಿರುವ ರಮೇಶ್ ಅರವಿಂದ್ ಮೊನ್ನೆ ಕೋಟದಲ್ಲಿ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪಡೆದುಕೊಂಡಿದ್ದರು.

ಕಾಕತಾಳೀಯ ಎಂಬಂತೆ ಅದರ ಮರುದಿನವೇ ಶಿವರಾಮ ಕಾರಂತರ ಆಸಕ್ತಿಯ ಕ್ಷೇತ್ರವಾಗಿದ್ದ ಯಕ್ಷಗಾನದ ಪೋಷಾಕು ಧರಿಸಿ ಫೋಟೋ ಶೂಟ್ ಮಾಡಿಕೊಂಡಿದ್ದಾರೆ. ಯಕ್ಷಗಾನ ಪೋಷಾಕಿನಲ್ಲಿ ಫೋಸ್ ಕೊಟ್ಟು ರೋಮಾಂಚನಗೊಂಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ರಮೇಶ್ ಅರವಿಂದ್ "ಯಕ್ಷಾವತಾರ" ದ ವಿಡಿಯೋ ವೈರಲ್ ಆಗುತ್ತಿದೆ.

Edited By : Nirmala Aralikatti
PublicNext

PublicNext

12/10/2022 12:46 pm

Cinque Terre

30.03 K

Cinque Terre

4

ಸಂಬಂಧಿತ ಸುದ್ದಿ