ಮುಲ್ಕಿ: ಖ್ಯಾತ ಚಲನಚಿತ್ರ ನಟ ಆದಿತ್ಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ದೇವಸ್ಥಾನದ ಅರ್ಚಕ ನರಸಿಂಹ ಭಟ್ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದ ವತಿಯಿಂದ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ನಟನನ್ನು ಗೌರವಿಸಿದರು.
ಈ ಸಂದರ್ಭ ನಟ ಆದಿತ್ಯ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕರಾವಳಿ ಪ್ರದೇಶಗಳು ನನ್ನ ಮೆಚ್ಚಿನ ತಾಣಗಳಾಗಿದ್ದು ಓಂ ಪ್ರಕಾಶ್ ಅವರ ಇಲಾಖೆ ಚಲನ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟನೆ ಮಾಡುತ್ತಿದ್ದು, ಫಿಲಂ ಶೂಟಿಂಗ್‌ಗೆ ಬಂದಿದ್ದೇನೆ. ಈ ವೇಳೆ ಬಪ್ಪನಾಡು ದೇವಿ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು.
ಈ ಸಂದರ್ಭ ರಂಗಕರ್ಮಿ ಚಂದ್ರಶೇಖರ ಸುವರ್ಣ, ದೇವಸ್ಥಾನದ ಸಿಬ್ಬಂದಿ ಶಿವಶಂಕರ್, ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು. ಈ ವೇಳೆ ನಟನ ಅಭಿಮಾನಿಗಳು ನಟ ಆದಿತ್ಯನ ಜೊತೆಗೆ ಸೆಲ್ಫಿ ತೆಗೆದು ಸಂಭ್ರಮಿಸಿದರು.
Kshetra Samachara
14/06/2022 07:45 pm