ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆಯಲ್ಲಿ 'ರಾಜ್ ಸೌಂಡ್ಸ್ &ಲೈಟ್ಸ್' ಚಿತ್ರ ತಂಡದಿಂದ ರೋಡ್ ಶೋ

ಮೂಡುಬಿದಿರೆ: ಜನರ ಬಳಿ ಚಿತ್ರ ತಲುಪಬೇಕೆನ್ನುವ ದೃಷ್ಟಿಯಿಂದ "ರಾಜ್ ಸೌಂಡ್ಸ್ &ಲೈಟ್ಸ್" ಚಿತ್ರ ತಂಡವು ಇತರ ಕಲಾವಿದರನ್ನು ಸೇರಿಸಿಕೊಂಡು ಇಂದು ಸಂಜೆ ಮೂಡುಬಿದಿರೆಯಲ್ಲಿ ನಿಶ್ಮಿತಾ ಟವರ್ಸ್‌ನಿಂದ ಅಮರಶ್ರೀ ಟಾಕೀಸ್‌ವರೆಗೂ ರೋಡ್ ಶೋ ನಡೆಸಲಿದೆ ಎಂದು ಚಿತ್ರದ ನಾಯಕನಟ ವಿನೀತ್ ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚಿತ್ರ ಮಂದಿರಗಳಲ್ಲಿ ಜನರಿಂದ ತುಳು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು ತುಳು ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಂಗಳೂರು ಸಹಿತ ನಮ್ಮ ದೇಶದ 6 ಕಡೆಗಳಲ್ಲಿ ಮತ್ತು ವಿದೇಶದ 11 ಕಡೆಗಳಲ್ಲಿ ಪ್ರೀಮಿಯರ್ ಶೋ ನೀಡಿದ ಹೆಗ್ಗಳಿಕೆಯನ್ನು ಹೊಂದಿದೆ. ಈ ಸಿನೆಮಾದಲ್ಲಿ ಅತ್ಯುತ್ತಮವಾದ ಸಂಗೀತವಿದ್ದು, ಅಸಂಬದ್ಧ ಸಂಭಾಷಣೆಯಿಲ್ಲದೆ ಉತ್ತಮ ಕಥೆಯೊಂದಿಗೆ ಸಿನೆಮಾವು ಮೂಡಿ ಬಂದಿದೆ. ಈ ಸಿನೆಮಾವು ಯುವಕರನ್ನು ಬಹಳಷ್ಟು ಆಕರ್ಷಿಸಿದ್ದು, ಮತ್ತಷ್ಟು ಜನ ಚಿತ್ರ ಮಂದಿರಕ್ಕೆ ಆಗಮಿಸಿ ಪ್ರೋತ್ಸಾಹ ನೀಡುವಂತೆ ಚಿತ್ರ ತಂಡ ಆಗ್ರಹಿಸಿದೆ. ಅಲ್ಲದೆ ಹಳ್ಳಿಯ ಜನರನ್ನು ಈ ಚಲನಚಿತ್ರವು ತಲುಪಬೇಕೆನ್ನುವ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ಇರುವ ಸಭಾಭವನಗಳಲ್ಲಿ ಮುಂದೆ ಚಲನಚಿತ್ರವನ್ನು ಪ್ರದರ್ಶಿಸುವ ಯೋಚನೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹಾಸ್ಯನಟ ಉಮೇಶ್ ಮಿಜಾರು, ಸಹ ನಿರ್ಮಾಪಕ ನಿತಿನ್ ರಾಜ್ ಶೆಟ್ಟಿ , ನಿರೂಪಕ ನಿತೇಶ್ ಶೆಟ್ಟಿ ಎಕ್ಕಾರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

28/05/2022 05:16 pm

Cinque Terre

17.71 K

Cinque Terre

0