ಮಂಗಳೂರು: ಪಿಬಿಪಿ ಫಿಲ್ಮ್ಸ್ ಬ್ಯಾನರಿನಡಿ ನಿರ್ಮಾಣಗೊಂಡಿರುವ ಬಹು ನಿರೀಕ್ಷಿತ ತುಳುಚಿತ್ರ 'ಸೋಡಾ ಶರ್ಬತ್ ' ಇದೇ ಡಿ.31ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.
ತುಳು ಚಿತ್ರರಂಗದ ಹೆಸರಾಂತ ಕಲಾವಿದರಾದ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರ್ ಸೇರಿದಂತೆ ಕೊಂಕಣಿ ಮತ್ತು ತುಳುವಿನ ಪ್ರಬುದ್ಧ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಎರಡೂವರೆ ತಾಸಿನ ಈ ಚಿತ್ರದಲ್ಲಿ ಮೊದಲ ಬಾರಿಗೆ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಭೋಜ ರಾಜ್ ವಾಮಂಜೂರು ಕಾಣಿಸಿಕೊಳ್ಳಲಿದ್ದಾರೆ. ಎರಡು ಹಾಡುಗಳಿದ್ದು, ಇಂಡಿಯನ್ ಐಡಿಯಲ್ ಖ್ಯಾತಿಯ ನಿಹಾಲ್ ತಾವ್ರೊ ಹಾಗೂ ದೇವದಾಸ್ ಕಾಪಿಕಾಡ್ , ಭೋಜರಾಜ್ ವಾಮಂಜೂರು ಜೊತೆಗೂಡಿ ಹಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಭೋಜರಾಜ್ ವಾಮಂಜೂರು, ಮೆಲ್ವಿನ್, ಉಮೇಶ್ ಮಿಜಾರ್ ಇನ್ನಿತರರು ಉಪಸ್ಥಿತರಿದ್ದರು.
Kshetra Samachara
17/12/2021 11:54 am