ಮುಲ್ಕಿ: ಕನ್ನಡ ಚಿತ್ರರಂಗದ ಮೇರು ನಟ ದಿ. ಡಾಕ್ಟರ್ ರಾಜಕುಮಾರ್ ಪುತ್ರ ಪುನೀತ್ ರಾಜಕುಮಾರ್ ಆಕಸ್ಮಿಕ ನಿಧನ ಚಿತ್ರರಂಗ ಹಾಗೂ ಇಡೀ ಜಗತ್ತಿಗೆ ತುಂಬಲಾರದ ನಷ್ಟ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಸಾಲ ಮೇಳದ ರುವಾರಿ ಜನಾರ್ಧನ ಪೂಜಾರಿ ಹೇಳಿದ್ದಾರೆ.
ಮೂಲ್ಕಿಯಲ್ಲಿ ಬಿಲ್ಲವ ಮುಂದಾಳು ದಿ.ಜಯ ಸುವರ್ಣ ರವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ತಮ್ಮ ಹಾಗೂ ಡಾ.ರಾಜ್ ಕುಟುಂಬದ ಅವಿನಾಭಾವ ಸಂಬಂಧಗಳನ್ನು ನೆನಪಿಸಿಕೊಂಡು ಪುನೀತ್ ರಾಜಕುಮಾರ್ ಆಕಸ್ಮಿಕ ಸಾವಿನ ಬಗ್ಗೆ ಕಣ್ಣೀರಿಟ್ಟರು
Kshetra Samachara
31/10/2021 04:35 pm