ಉಡುಪಿ: ಅಭಿನಯದಲ್ಲಿ ಅಪೂರ್ವ ಯಶಸ್ಸು ಸಂಪಾದಿಸುವುದರ ಜೊತೆಗೆ ಹತ್ತಾರು ಸೇವಾ ಕಾರ್ಯಗಳ ಮೂಲಕ ಮಾದರಿಯಾದ ಮಾನವೀಯ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದ ನಟ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದ ವಾರ್ತೆ ತಿಳಿದು ತೀವ್ರ ಖೇದವಾಗಿದೆ. ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಮತ್ತು ಪುನೀತ್ ಅವರ ವಿಯೋಗದ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥರು ಸಂತಾಪ ಸೂಚಿಸಿದ್ದಾರೆ.
Kshetra Samachara
29/10/2021 04:46 pm