ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಜೆಸಿಐ ಸಂಸ್ಥೆ ವತಿಯಿಂದ ಅನಾರೋಗ್ಯ ಪೀಡಿತರಿಗೆ ಧನಸಹಾಯ, ಕೊರೊನಾ ವಾರಿಯರ್ಸ್ ಗೌರವ

ಮುಲ್ಕಿ: ಜೆಸಿಐ ಮುಲ್ಕಿ ಘಟಕಕ್ಕೆ ಜೆಸಿಐ ವಲಯಾಧ್ಯಕ್ಷ ಸೌಜನ್ಯ ಹೆಗ್ದೆ ಭೇಟಿ, ವಿವಿಧ ಜನಪರ ಯೋಜನೆಗಳ ಅನುಷ್ಠಾನ, ಕೊರೊನಾ ವಾರಿಯರ್ಸ್ ಗೌರವ ಕಾರ್ಯಕ್ರಮಗಳು ನಡೆಯಿತು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಜೆಸಿಐ ಸಂಸ್ಥೆಯ ಅಧ್ಯಕ್ಷ ದಿನೇಶ್ ಶೆಟ್ಟಿ ವಹಿಸಿ ಮಾತನಾಡಿ, ಕೊರೊನಾ ಸಂಕಷ್ಟದ ದಿನಗಳಲ್ಲಿ ಸಂಸ್ಥೆಯ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿ ಅನೇಕ ಜನಪರ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ 4 ಮಾರ್ಗಸೂಚಿ ನಾಮಫಲಕಗಳ ಅನಾವರಣ ನಡೆಯಿತು. ಬಳಿಕ ಮುಲ್ಕಿ ಬಂಟರ ಸಂಘದ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅನಾರೋಗ್ಯ ಪೀಡಿತರಿಗೆ ಧನಸಹಾಯ ಹಾಗೂ ಕೊರೊನಾ ವಾರಿಯರ್ಸ್ ಗಳಾದ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರಪೂಜಾರಿ, ಸರ್ಕಲ್ ಇನ್ಸ್ಪೆಕ್ಟರ್ ಕುಸುಮಾಧರ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೃಷ್ಣ ರವರನ್ನು ಗೌರವಿಸಲಾಯಿತು.

ಮುಖ್ಯಅತಿಥಿಗಳಾಗಿ ನವೀನ್ ಶೆಟ್ಟಿ, ದೀಪಕ್ ಗಂಗೂಲಿ ಕಾರ್ಯಕ್ರಮದ ನಿರ್ದೇಶಕ ಚಂದ್ರಶೇಖರ್ (ಜೆಇ), ಶ್ರೀ ದರ್ಶನ್, ಕಾರ್ಯದರ್ಶಿ ಆಶ್ರಯ ಸುವರ್ಣ, ಪೂರ್ಣಿಮಾ ಡಿ ಶೆಟ್ಟಿ, ಅನುರಾಗ್ ಪಿ ಕರ್ಕೇರಾ, ಅಶೋಕ್ ಕುಮಾರ್ ಶೆಟ್ಟಿ, ಉದಯ ಅಮಿನ್ ಮಟ್ಟು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

07/09/2021 11:45 am

Cinque Terre

6.67 K

Cinque Terre

0