ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:300 ನಾಗರಿಕರಿಗೆ ಉಚಿತ ಲಸಿಕೆ; ಶಾಸಕ ಡಾ. ಭರತ್ ಶೆಟ್ಟಿ ಲಸಿಕಾ ಶಿಬಿರಗಳಿಗೆ ಭೇಟಿ

ಮಂಗಳೂರು:ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಶಕ್ತಿ ನಗರ ಇದರ ಜಂಟಿ ಆಯೋಜನೆಯಲ್ಲಿ ಪಮ್ಮದ ಯಾನೆ ದೈವಾದಿಗರ ಸಮಾಜ ಭವನ ಗಂಧ ಕಾಡು ಮತ್ತು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಮುಗ್ರೋಡಿ ತಲಾ 150 ಜನರ ಪ್ರಕಾರ ಒಟ್ಟು 300 ಜನರಿಗೆ ಕೋವಿಡ್ ಲಸಿಕೆ ನೀಡುವ ಎರಡು ಪ್ರತ್ಯೇಕ ಶಿಬಿರಗಳಿಗೆ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಭೇಟಿ ನೀಡಿ ಆಯೋಜನೆಯನ್ನು ಪರಿಶೀಲಿಸಿ, ಲಸಿಕಾ ಶಿಬಿರಕ್ಕೆ ಸ್ಥಳಾವಕಾಶ ನೀಡಿದ ಪಮ್ಮದ ಯಾನೆ ದೈವಾದಿಗರ ಸಮಾಜ ಸಂಘ ಗಂಧಕಾಡು ಮತ್ತು ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಮುಗ್ರೋಡಿ ಇವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಸಂಗೀತಾ ಆರ್ ನಾಯಕ್,ಸಂದೀಪ್ ಪಚ್ಚನಾಡಿ ಮಂಡಲ ಪ್ರಧಾನ ಕಾರ್ಯದರ್ಶಿ, ಪ್ರಶಾಂತ್ ಪೈ ಮಂಡಲ ಫಲಾನುಭವಿಗಳ ಪ್ರಕೋಷ್ಠ ಪ್ರಮುಖ್,ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷರಾದ ರಾಮ ಮುಗ್ರೋಡಿ, ಪಕ್ಷದ ವಿವಿಧ ಜವಾಬ್ದಾರಿ ಹೊಂದಿರುವ ಇನ್ನುಳಿದ ಪ್ರಮುಖರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/08/2021 06:43 pm

Cinque Terre

10.07 K

Cinque Terre

1