ಮಂಗಳೂರು: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಎಸ್ ಸಿಡಿಸಿಸಿ ಬ್ಯಾಂಕ್ ವಿಶೇಷ ಠೇವಣಿ ಹಾಗೂ ಸಾಲ ನೀಡುವ ಅಭಿಯಾನವನ್ನು ಹಮ್ಮಿಕೊಂಡಿದೆ. ಒಂದು ವರ್ಷದಿಂದ ಮೇಲ್ಪಟ್ಟು 2 ವರ್ಷಗಳ ಠೇವಣಿಗೆ 6.50 ಶೇಕಡಾ ಬಡ್ಡಿಯನ್ನು ವಿಧಿಸಲಾಗುತ್ತದೆ. 3 ವರ್ಷದಿಂದ ಮೇಲ್ಪಟ್ಟು 5 ವರ್ಷದವರೆಗಿನ 25 ಲಕ್ಷ ರೂ. ಗಿಂತ ಅಧಿಕ ಮೊತ್ತದ ಠೇವಣಿಗೆ ಶೇ.8ರ ಬಡ್ಡಿಯನ್ನು ವಿಧಿಸಲಾಗುತ್ತದೆ ಎಂದು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಮಾತನಾಡಿದ ಅವರು, ಸಾಂಸ್ಥಿಕ ಠೇವಣಿಗಳಿಗೆ 7.50 ಶೇ. ಬಡ್ಡಿದರ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ, ಸೈನಿಕರಿಗೆ ಹಾಗೂ ಮಹಿಳೆಯರ ಠೇವಣಿಗೆ ಶೇ. 0.50ರ ಬಡ್ಡಿದರ ನೀಡಲಾಗುತ್ತದೆ. ಅಲ್ಲದೆ ಹಿರಿಯ ನಾಗರಿಕರು ಇಡುವ 10 ಲಕ್ಷ ರೂ. ಮೇಲ್ಪಟ್ಟ ಠೇವಣಿಗಳಿಗೆ ಶೇ. 0.25 ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ. ಸಹಕಾರ ಸಂಘಗಳ 3 ವರ್ಷಗಳ ಅವಧಿಯ ಠೇವಣಿಗೆ ಶೇ.8 ಬಡ್ಡಿದರ ನೀಡಲಾಗುತ್ತದೆ. ಇದು ವಿಶೇಷ ಠೇವಣಿ ಅಭಿಮಾನಕ್ಕೆ ಮಾತ್ರ ಸೀಮಿತವಾಗಿದೆ ಎಂದರು.
ಎಸ್ ಸಿಡಿಸಿಸಿ ಬ್ಯಾಂಕ್ ಚಿನ್ನಾಭರಣದ ಒಟ್ಟು ಮೌಲ್ಯದ ಶೇ.90ರಷ್ಟು ಸಾಲವನ್ನು ತಿಂಗಳ ಬಡ್ಡಿ ಕೇವಲ 0.7%ಗೆ ನೀಡುತ್ತದೆ. ಅಲ್ಲದೆ ಗರಿಷ್ಠ 75ಲಕ್ಷ ರೂ.ವರೆಗೆ ಬ್ಯಾಂಕ್ ಗೃಹ ಸಾಲ ನೀಡುತ್ತದೆ. 25 ಲಕ್ಷ ರೂ.ವರೆಗೆ ಶೇ. 9.50 ಬಡ್ಡಿದರದಲ್ಲಿ ಸಾಲ ನೀಡಿದರೆ, 25 ಲಕ್ಷ ರೂ.ಗಿಂತ ಮೇಲ್ಪಟ್ಟ ಮೊತ್ತಕ್ಕೆ ಶೇ.8.95% ಬಡ್ಡಿದರ ವಿಧಿಸಲಾಗುತ್ತದೆ ಎಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
Kshetra Samachara
27/09/2022 07:48 am