ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ ಬೀಚ್ ನಲ್ಲಿ ಅಲೆಗಳ ಮೇಲೆ ಸೇತುವೆ : ರಾಜ್ಯದಲ್ಲೇ ಮೊದಲು!

ವರದಿ: ರಹೀಂ ಉಜಿರೆ

ಮಲ್ಪೆ : ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಲ್ಪೆ ಬೀಚ್ ಗೆ ಹೊಸ ಆಕರ್ಷಣೆಯೊಂದು ಸೇರ್ಪಡೆಯಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಎಂಬಂತೆ ಸಮುದ್ರದ ಅಲೆಗಳ ಮೇಲೆ ನಡೆದು ಸಾಗುವಂತಹ ತೇಲುವ ಸೇತುವೆ (floting bridge) ಇಂದು ಉದ್ಘಾಟನೆಗೊಂಡಿತು.

100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲವಿರುವ ತೇಲುವ ಸೇತುವೆ ಇದಾಗಿದ್ದು, ಸಮುದ್ರದ ಅಲೆಗಳ ಮೇಲೆ ನಡೆದು ಸಾಗುವ ಅನುಭವವನ್ನು ಈ ಸೇತುವೆ ಪ್ರವಾಸಿಗರಿಗೆ ನೀಡಲಿದೆ.

ಈತನಕ ಮಲ್ಪೆ ಬೀಚ್ ಗೆ ಬಂದವರು ಅಲೆಗಳ ಜೊತೆ ಸರಸ ,ಬೋಟಿಂಗ್ ,ಪ್ಯಾರಾಚೂಟ್ ಗಳಲ್ಲಿ ಮಜಾ ಮಾಡುತ್ತಿದ್ದರು.ಇದೀಗ ಹೊಸ ಸೇರ್ಪಡೆ , ಫ್ಲೋಟಿಂಗ್ ಬ್ರಿಡ್ಜ್.

ಸಮುದ್ರದ ದಡದಿಂದ ತೆರೆಗಳ ಮೇಲೆ ನಿರ್ಮಾಣವಾಗಿರುವ ಈ ಸೇತುವೆ, ನೀರಿನಲ್ಲಿ ತೇಲುವ ಮಾದರಿಯಲ್ಲಿ ನಿರ್ಮಾಣವಾಗಿದೆ. ಇದರ ಮೇಲೆ ನಡೆದು ಸಮುದ್ರದಲ್ಲಿ ನೂರು ಮೀಟರ್ ವರೆಗೂ ನಡೆದು ಸಾಗುವ ಮೂಲಕ ತೇಲುವ ಸೇತುವೆ ಅನುಭವವನ್ನು ಪ್ರವಾಸಿಗರು ಪಡೆದುಕೊಳ್ಳಬಹುದು. ಈ ಸೇತುವೆಯ ಮೇಲೆ ನಡೆದು ಸಾಗುವ ಪ್ರವಾಸಿಗರು ಅಲೆಗಳ ರಭಸಕ್ಕೆ ಸಮುದ್ರಕ್ಕೆ ಬೀಳದಂತೆ ತಡೆಯಲು ಸೇತುವೆಯ ಎರಡೂ ಬದಿಗಳಲ್ಲಿ ರೇಲಿಂಗ್ಸ್ ಕೂಡ ಅಳವಡಿಸಲಾಗಿದೆ. ಪಕ್ಕದ ರಾಜ್ಯ ಕೇರಳದ ಬೇಪೂರ್ ಬೀಚ್ ನಲ್ಲಿ ಇದೇ ರೀತಿಯ ಸೇತುವೆ ನಿರ್ಮಾಣವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ ಕರ್ನಾಟಕದ ಮಲ್ಪೆ ಬೀಚ್ ನಲ್ಲೂ ಪ್ರಥಮ ಬಾರಿಗೆ ತೇಲುವ ಸೇತುವೆಯ ಪ್ರಯೋಗ ಮಾಡಲಾಗುತ್ತಿದೆ.

ಇದು ರಾಜ್ಯದ ಮೂಲೆಮೂಲೆಗಳಿಂದ ಬರುವ ಪ್ರವಾಸಿಗರಿಗೆ ಹೊಸ ಅನುಭವ ನೀಡುವುದರ ಜೊತೆಗೆ, ಮಲ್ಪೆ ಪ್ರವಾಸೋದ್ಯಮಕ್ಕೂ ಹೊಸ ಮೆರಗು ನೀಡಲಿದೆ.ಪ್ರಾಯೋಗಿಕವಾಗಿ ಇದನ್ನು ಪರಿಚಯಿಸಲಾಗುತ್ತಿದ್ದು ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ.ಇವತ್ತು ಜಿಲ್ಲಾಧಿಕಾರಿ ಕೂರ್ಮಾ ರಾವ್ ,ಶಾಸಕ ರಘುಪತಿ ಭಟ್ ಇದಕ್ಕೆ ಚಾಲನೆ ನೀಡಿ,ಫ್ಲೋಟಿಂಗ್ ಬ್ರಿಡ್ಜ್ ನಲ್ಲಿ ನಡೆದು ಖುಷಿಪಟ್ಟರು.

Edited By : Shivu K
PublicNext

PublicNext

06/05/2022 08:52 pm

Cinque Terre

40.2 K

Cinque Terre

2

ಸಂಬಂಧಿತ ಸುದ್ದಿ