ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಲ್ಲಿಗೆ ದರ ಪರಿಷ್ಕರಣೆ: ಗರಿಷ್ಠ 2100 ನಿಗದಿ: ಬೆಳೆಗಾರರ ಮೊಗದಲ್ಲಿ ಮಂದಹಾಸ

ಶಂಕರಪುರ: ಹೂವುಗಳ ರಾಜ ಎನಿಸಿರುವ ಶಂಕರಪುರ ಮಲ್ಲಿಗೆ ದರವನ್ನು ಗರಿಷ್ಠ 2,100 ರೂ.ಗೆ ಏರಿಸಲಾಗಿದ್ದು, ಮಲ್ಲಿಗೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

ಈವರೆಗೆ ಬೆಳೆಗಾರರಿಗೆ ಒಂದು ಅಟ್ಟೆ ಮಲ್ಲಿಗೆಗೆ ಗರಿಷ್ಠ 1,200 ರೂ. ಸಿಗುತ್ತಿತ್ತು. ಆದರೆ ಕನಿಷ್ಠ ದರವೆಂಬುದು ಇಲ್ಲ. ಬೇಡಿಕೆಯಿಲ್ಲದ ಸಂದರ್ಭಗಳಲ್ಲಿ ಅಟ್ಟೆಗೆ 90 ರೂ.ಗೆ ಕುಸಿದದ್ದೂ ಇದೆ. ಬೆಳೆಗಾರರಿಗೆ ಹೂ ಕಟ್ಟುವ ಖರ್ಚೇ ಹೆಚ್ಚಾಗಿ ಮಲ್ಲಿಗೆಯನ್ನು ಕೊಯ್ದು ಅಲ್ಲೇ ಎಸೆಯುವ ಸಂದರ್ಭವೂ ಎದುರಾಗುತ್ತಿತ್ತು. ಬೇಡಿಕೆ ಎಷ್ಟೇ ಹೆಚ್ಚಾದರೂ ಬೆಳೆಗಾರರಿಗೆ ಕಟ್ಟೆಯಲ್ಲಿ ಸಿಕ್ಕುವ ಗರಿಷ್ಠ ದರವೇ ಅಂತಿಮ.

ಅತೀಹೆಚ್ಚು ಬೇಡಿಕೆಯಿರುವ ಸಂದರ್ಭ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ಅಟ್ಟೆಗೆ 2,000ದಿಂದ 2,500 ರೂ. ವರೆಗೂ ಮಾರುತ್ತಾರೆ. ಮಲ್ಲಿಗೆ ಕೃಷಿಯ ಖರ್ಚು ವೆಚ್ಚ ವಿಪರೀತ ಏರಿಕೆಯಾಗಿದ್ದು, ನಿರ್ವಹಣೆ ಮತ್ತು ಸಾಗಾಟದ ಖರ್ಚು ಕೂಡ ಅಧಿಕವಿರುವುದರಿಂದ ಈ ಸಂಬಂಧ ಸಭೆ ನಡೆಸಲಾಗಿತ್ತು.ಸಭೆಯಲ್ಲಿ ಗರಿಷ್ಠ ದರ ಪರಿಷ್ಕರಣೆ ನಡೆದಿದೆ. ಕೆಲವು ವರ್ಷಗಳ ಹಿಂದೆ ಅಟ್ಟೆಗೆ 240 ರೂ. ಇದ್ದ ಗರಿಷ್ಠ ದರ 420 ರೂ.ಗೆ ಏರಿಕೆಯಾಗಿತ್ತು. ಬಳಿಕ 820ಕ್ಕೆ ಏರಿದ್ದು, 2018ರ ನವೆಂಬರ್‌ನಲ್ಲಿ 1,250 ರೂ.ಗೆ ಪರಿಷ್ಕರಿಸಲಾಗಿತ್ತು. ಪರಿಷ್ಕೃತ ದರ ಡಿ. 23ರಿಂದ ಅನ್ವಯವಾಗಲಿದೆ ಎಂದು ಮಲ್ಲಿಗೆ ದರ ನಿಗದಿ ಕೇಂದ್ರದ ಪ್ರಕಟನೆ ತಿಳಿಸಿದೆ. ಗರಿಷ್ಠ ದರ ಏರಿಕೆ ಕ್ರಮವನ್ನು ಉಡುಪಿ ಜಿಲ್ಲಾ ಕೃಷಿಕ ಸಂಘ ಮತ್ತು ಬೆಳೆಗಾರರು ಸ್ವಾಗತಿದ್ದಾರೆ.

Edited By : Manjunath H D
Kshetra Samachara

Kshetra Samachara

22/12/2021 02:30 pm

Cinque Terre

9.99 K

Cinque Terre

3