ಮುಲ್ಕಿ: ಕೆನರಾ ಬ್ಯಾಂಕ್ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಅವರ ಹುಟ್ಟುಹಬ್ಬವನ್ನು ಕೆನರಾ ಬ್ಯಾಂಕ್ ಮುಲ್ಕಿ ಶಾಖೆಯಲ್ಲಿ ಆಚರಿಸಲಾಯಿತು.
ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿ ಮಹಾಪ್ರಬಂಧಕ ಬಿ. ಯೋಗೀಶ್ ಆಚಾರ್ಯ ಅವರು ಪುತ್ಥಳಿಗೆ ದೀಪ ಬೆಳಗಿಸಿ ಹಾರ ಅರ್ಪಿಸಿ ಗೌರವ ಸಲ್ಲಿಸಿದರು.
ನಂತರ ನಡೆದ ಗ್ರಾಹಕರ ಸಮಾವೇಶ ಹಾಗೂ ಸಾಲಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ ದಿ. ಅಮ್ಮೆಂಬಳ ಸುಬ್ಬರಾವ್ ಅವರ ಆದರ್ಶ ಪಾಲಿಸಿಕೊಂಡು ಗ್ರಾಹಕರ ಹಿತರಕ್ಷಣೆ ಬ್ಯಾಂಕುಗಳ ಮೂಲಮಂತ್ರವಾಗಲಿ ಎಂದರು.
ಮಂಗಳೂರು ವೃತ್ತ ಕಚೇರಿ ಉಪ ಮಹಾ ಪ್ರಬಂಧಕ ಸುಚಿತ್ರ ಹಾಗೂ ಮುಲ್ಕಿ ಶಾಖೆ ಹಿರಿಯ ಪ್ರಬಂಧಕ ಸುರೇಶ್ ಅಮೀನ್, ರಾಜೇಂದ್ರ, ಬ್ಯಾಂಕಿನ ಹಿರಿಯ ಪ್ರಬಂಧಕರಾದ ರಮ್ಯಾ ಭಟ್ ಉಪಸ್ಥಿತಿಯಲ್ಲಿ ಸಾಲ ಪತ್ರ ವಿತರಣೆ ನಡೆಯಿತು.
Kshetra Samachara
23/11/2020 08:59 am