ಬೆಳ್ತಂಗಡಿ: ಬೆಂಗಳೂರು ಉತ್ತರದ ಬಿಜೆಪಿ ಎಸ್‌ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ನರೇಂದ್ರ ಕುಮಾರ್ (45) ಹೃದಯಾಘಾತದಿಂದ ಇಂದು ಬೆಳಗ್ಗೆ ಧರ್ಮಸ್ಥಳದಲ್ಲಿ ನಿಧನ ಹೊಂದಿದ್ದಾರೆ.
ಡಾ. ನರೇಂದ್ರ ಕುಮಾರ್ ಅವರು ಬೆಂಗಳೂರು ಜಿಲ್ಲೆಯ ಯಲಹಂಕ ಮತ್ತು ಬಂಡಿಕೊಡಿಗೆಹಳ್ಳಿಯಲ್ಲಿರುವ ಶ್ರೀ ಜ್ಞಾನಕ್ಷಿ ವಿದ್ಯಾ ಮಂದಿರದ ಮಾಲೀಕರಾಗಿದ್ದರು. ಡಾ. ನರೇಂದ್ರ ಕುಮಾರ್ ಅವರ ಪತ್ನಿ ಸಂದರ್ಶಿನಿ ಶ್ರೀ ಜ್ಞಾನಕ್ಷಿ ವಿದ್ಯಾ ಕೇಂದ್ರದಲ್ಲಿ ಪ್ರಾಂಶುಪಾಲರಾಗಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರು ಉತ್ತರ ವಲಯದ ಬಿಜೆಪಿ ಎಸ್‌ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು ನಿನ್ನೆ ಬೆಂಗಳೂರಿನಿಂದ ತಮ್ಮ ಶಾಲೆಯ ಶಿಕ್ಷಕಿಯರನ್ನು ಪುತ್ತೂರು ವಿವೇಕಾನಂದ ಕಾಲೇಜಿಗೆ ತರಬೇತಿಗಾಗಿ ಕರೆತಂದಿದ್ದರು. ಈ ವೇಳೆ ನರೇಂದ್ರ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು, ಸ್ನೇಹಿತರು ಕೂಡ ಇದ್ದರು. ಟಿಟಿ ವಾಹನದಲ್ಲಿ ಬಂದಿದ್ದ ಅವರು ಶಿಕ್ಷಕಿಯರನ್ನು ತರಬೇತಿಗೆ ಬಿಟ್ಟು ಪತ್ನಿ ಮಕ್ಕಳೊಂದಿಗೆ ಧರ್ಮಸ್ಥಳ ಸನ್ನಿಧಿ ಗೆಸ್ಟ್ ನಲ್ಲಿ ರೂಂ ಮಾಡಿದ್ದರು. ಇಂದು ಬೆಳಗ್ಗೆ ಏಕಾಏಕಿ ಡಾ. ನರೇಂದ್ರ ಕುಮಾರ್ ಅವರಿಗೆ ಎದೆನೋವು ಕಾಣಿಸಿದ್ದು, ಕೂಡಲೇ ಅವರನ್ನು ಉಜಿರೆಯ ಆಸ್ಪತ್ರೆಗೆ ಕರೆತರುವ ಪ್ರಯತ್ನ ನಡೆಸಿದ್ದು, ನೇತ್ರಾವತಿ ಸಮೀಪ ವಾಹನದಲ್ಲೇ ಹೃದಯಾಘಾತದಿಂದ ನಿಧನರಾದ ಎಂದು ತಿಳಿದುಬಂದಿದೆ.
ಡಾ.ನರೇಂದ್ರ ಕುಮಾರ್ ಅವರ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಶವಪರೀಕ್ಷೆಗೆ ತರಲಾಗಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
11/05/2022 10:46 pm