ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಂಚನಕೆರೆ: ಸಾವಯವ ಕೃಷಿಗೆ ಪ್ರೋತ್ಸಾಹ ನೀಡಿ ಉತ್ತಮ ಇಳುವರಿ ಪಡೆಯಿರಿ

ಮುಲ್ಕಿ: ವಲಯ ಕೃಷಿಕ ಸಂಘದ ಆಶ್ರಯದಲ್ಲಿ ಕೆಂಚನಕೆರೆಯ ಹಾಲು ಉತ್ಪಾದಕರ ಸಂಘದಲ್ಲಿ ಕೃಷಿ ಮಾಹಿತಿ ಶಿಬಿರ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ನಡೆಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ.ಕೃಷಿ ಇಲಾಖೆಯ ಮುಖ್ಯಸ್ಥ ವಿ.ಎನ್.ಕುಲಕರ್ಣಿ ವಹಿಸಿದ್ದರು

ಕೃಷಿ ವಿಜ್ಞಾನ ಕೇಂದ್ರ ಮಂಗಳೂರಿನ ಮುಖ್ಯಸ್ಥ ಡಾ.ಟಿ ಜೆ ರಮೇಶ್ ರವರು ಕೃಷಿ ಮಾಹಿತಿ ನೀಡಿ ರೈತರು ಕೃಷಿ ಮಾಡುವ ಮೊದಲು ಮಣ್ಣು ಪರೀಕ್ಷೆಯ ಮುಖಾಂತರ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಿದರೆ ಉತ್ತಮ ಇಳುವರಿ ಪಡೆಯಬಹುದು,ಕೃಷಿ ಯಂತ್ರೋಪಕರಣಗಳನ್ನು ಉಪಯೋಗಿಸುವ ಮುಖಾಂತರ ಮಿತ ಬೆಲೆಯಲ್ಲಿ ಕೃಷಿ ಕಾರ್ಯಗಳನ್ನು ನಡೆಸಬಹುದು. ಕೃಷಿ ಲಾಭದಾಯಕ ವಾಗಬೇಕಾದರೆ ವೈವಿಧ್ಯತೆ ಮತ್ತು ಶ್ರಮ ಬೇಕು ಎಂದರು

ವೇದಿಕೆಯಲ್ಲಿ ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ, ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್, ತೋಟಗಾರಿಕಾ ಇಲಾಖೆ ಮಂಗಳೂರಿನ ಸಹಾಯಕ ನಿರ್ದೇಶಕ ಪ್ರವೀಣ್, ಕೆಂಚನಕೆರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆನ್ಯೂಟ್ ಅರಾಹ್ನ, ಕಾರ್ಯದರ್ಶಿ ರವೀಂದ್ರ ಶೆಟ್ಟಿ, ಕೋಶಾಧಿಕಾರಿ ವಲ್ಲೇರಿಯನ್ ರೆಬೆಲ್ಲೊ , ಕೃಷಿಕರಾದ ಮುರಳೀಧರ ಭಂಡಾರಿ, ಬಾಲಚಂದ್ರ ಸನಿಲ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ರವರನ್ನು ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು.

Edited By : Somashekar
Kshetra Samachara

Kshetra Samachara

24/08/2022 01:54 pm

Cinque Terre

7.64 K

Cinque Terre

0

ಸಂಬಂಧಿತ ಸುದ್ದಿ