ಉಡುಪಿ: ಕೇದಾರೋತ್ಥಾನ ಟ್ರಸ್ಟ್, ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ವತಿಯಿಂದ ಈ ಬಾರಿ ಉಡುಪಿಯಲ್ಲಿ 2ನೇ ಹಂತದ "ಹಡಿಲು ಭೂಮಿ ಕೃಷಿ" ಅಭಿಯಾನ ಪ್ರಾರಂಭಗೊಂಡಿದೆ.ಇದಕ್ಕೆ ಬೇಕಾದ ಚಾಪೆ ನೇಜಿ ತಯಾರಿಕಾ ಘಟಕ ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿಯಲ್ಲಿ ನಿರ್ಮಿಸಲಾಗಿದ್ದು, ಚಾಪೆ ನೇಜಿ ತಯಾರಿಕಾ ಯಂತ್ರವನ್ನು ಕೇದಾರೋತ್ಥಾನ ಟ್ರಸ್ಟ್ ನ ಅಧ್ಯಕ್ಷರು, ಶಾಸಕರಾದ ಕೆ ರಘುಪತಿ ಭಟ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೇದಾರೋತ್ಥಾನ ಟ್ರಸ್ಟ್ ನ ಸದಸ್ಯರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ದಿನಕರ್ ಬಾಬು, ತಾಲ್ಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗಣೇಶ್, ಸ್ಥಳೀಯರಾದ ರಿಕೇಶ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Kshetra Samachara
28/07/2022 05:34 pm