ಉದ್ಯಾವರ: ಹೊಸ ಲಾರಿ ಚಾಸಿ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಜೆ ಸಂಭವಿಸಿದೆ.ಉದ್ಯಾವರ ಸೇತುವೆ ಬಳಿ ಈ ಅಪಘಾತ ನಡೆದಿದೆ.
ಪಲ್ಸರ್ ಬೈಕಿಗೆ ಲಾರಿ ಚಾಸೀಸ್ ತಾಗಿದ ಪರಿಣಾಮ ಕಟಪಾಡಿಯ ಮೂಡಬೆಟ್ಟು ನಿವಾಸಿ ಮಹಮ್ಮದ್ ರಫೀಕ್ ಬಾವಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
10/10/2022 06:34 pm