ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಜನಪ್ರಿಯ ವೈದ್ಯ ಡಾ.ಸುರೇಶ್ ಕುಮಾರ್ ನಿಧನ

ಸುರತ್ಕಲ್: ಇಲ್ಲಿನ ಜನಪ್ರಿಯ ವೈದ್ಯರಾದ ಡಾ.ಸುರೇಶ್ ಕುಮಾರ್ ಗುರುವಾರ ನಿಧನರಾದರು.ಎಲುಬಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಕಳೆದ ವಾರದ ವರೆಗೂ ವೀಲ್ ಚೆಯರ್ ಮೂಲಕ ತನ್ನ ಕ್ಲಿನಿಕ್‌ಗೆ ಬಂದು ರೋಗಿಗಳಿಗೆ ಔಷಧಿ ನೀಡುತ್ತಿದ್ದರು.

ವಾರದಿಂದ ಆರೋಗ್ಯ ಮತ್ತಷ್ಟು ಬೀಗಡಾಯಿಸಿದ್ದು ಮಂಗಳೂರಿನ ಒಮೆಗಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಹೃದಯಾಘಾತಕ್ಕೆ ಒಳಗಾಗಿ ಗುರುವಾರ ರಾತ್ರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೊರೊನಾ ದಿನಗಳಲ್ಲಿ ರೋಗಿಗಳಿಗೆ ಉತ್ತಮ ಧೈರ್ಯ ತುಂಬಿ ಚಿಕಿತ್ಸೆಯನ್ನು ನೀಡುತ್ತಿದ್ದ ಅವರು ಸಾಮಾಜಿಕ ಕಾರ್ಯಕರ್ತರಾಗಿ ಜನಾನುರಾಗಿಯಾಗಿದ್ದರು.

Edited By : Abhishek Kamoji
Kshetra Samachara

Kshetra Samachara

07/10/2022 01:08 pm

Cinque Terre

6.76 K

Cinque Terre

3