ಮುಲ್ಕಿ: ಕಿನ್ನಿಗೋಳಿ ಮೂಡಬಿದ್ರೆ ರಾಜ್ಯ ಹೆದ್ದಾರಿಯ ಮಾರುಕಟ್ಟೆ ಬಳಿಯ ಮೊಬೈಲ್ ಅಂಗಡಿ ಎದುರು ಭಾಗದಲ್ಲಿ ಆಟೋ ಬ್ರೇಕ್ ಫೇಲ್ ಆಗಿ ದ್ವಿಚಕ್ರವಾಹನಗಳಿಗೆ ಡಿಕ್ಕಿ ಹೊಡೆದಿದ್ದು ಅಂಗಡಿ ಮಾಲಿಕ ಪವಾಡ ಸದೃಶ ಪಾರಾಗಿದ್ದಾರೆ.
ಮುಲ್ಕಿಯ ಕೋಲ್ನಾಡ್ ಕಡೆಯಿಂದ ಮೂರು ಕಾವೇರಿ ಕಡೆಗೆ ಸಂಚರಿಸುತ್ತಿದ್ದ ಆಟೋ ಕಿನಿಗೊಳಿಯ ರಾಜ್ಯ ಹೆದ್ದಾರಿಯಲ್ಲಿ ಬ್ರೇಕ್ ಫೈಲ್ ಆಗಿ ಹೆದ್ದಾರಿ ಬದಿಯಲ್ಲಿದ್ದ ವೈಭವ್ ಮೊಬೈಲ್ ಅಂಗಡಿ ಫುಟ್ಪಾತ್ ನಲ್ಲಿ ಪಾರ್ಕಿಂಗ್ ಮಾಡಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಅಂಗಡಿಯ ಎದುರುಗಡೆ ನಿಂತಿದೆ.
ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದ್ದು ಮೊಬೈಲ್ ಅಂಗಡಿ ಮಾಲಿಕ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯ ಮೊಬೈಲ್ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Kshetra Samachara
18/09/2022 06:24 pm