ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ರಿಕ್ಷಾಕ್ಕೆ ಬಸ್ಸು ಡಿಕ್ಕಿ - ರಿಕ್ಷಾ ಚಾಲಕನಿಗೆ ಗಾಯ

ಹೆಬ್ರಿ : ವರಂಗದಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಗಾಯಗೊಂಡಿರುವ ಘಟನೆ ಹೆಬ್ರಿ ತಾಲೂಕಿನ ವರಂಗದಲ್ಲಿ ಮಂಗಳವಾರ ನಡೆದಿದೆ.

ತಾಲೂಕಿನ ಮುದ್ರಾಡಿ ಗ್ರಾಮ ಬಲ್ಲಾಡಿ ನಿವಾಸಿ ಸುಕೇಶ ಎಂಬವರು ಮಂಗಳವಾರ ತನ್ನ ಅಟೋರಿಕ್ಷಾದಲ್ಲಿ ವರಂಗ ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದಾಗ ವರಂಗ ಗ್ರಾಮದ ವರಂಗ ವ್ಯವಸಾಯ ಸಹಕಾರಿ ಸಂಘದ ಎದುರುಗಡೆ ಅವರ ಮುಂದುಗಡೆಯಿAದ ಅಂದರೆ ಹೆಬ್ರಿ ಕಡೆಗೆ ಹೋಗುತ್ತಿದ್ದ ಬಸ್ಸನ್ನು ಅದರ ಚಾಲಕ ಜನಾರ್ಧನ ಎಂಬವರು ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಬಸ್ಸಿನ ಹಿಂದುಗಡೆಯಿAದ ಹೋಗುತ್ತಿದ್ದ ಸುಕೇಶ್ ಅವರ ಅಟೋರಿಕ್ಷಾವು ಬಸ್ಸಿನ ಹಿಂಭಾಗಕ್ಕೆ ಡಿಕ್ಕಿಯಾಗಿ ಅಟೋರಿಕ್ಷಾದ ಮುಂದಿನ ಭಾಗವು ಜಖಂಗೊAಡಿದ್ದು, ಚಾಲಕ ಸುಕೇಶ್ ಗಾಯಗೊಂಡಿದ್ದಾರೆ.

ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

01/09/2022 11:04 pm

Cinque Terre

12.19 K

Cinque Terre

0

ಸಂಬಂಧಿತ ಸುದ್ದಿ