ಕುಂದಾಪುರ: ದನವೊಂದು ಅಡ್ಡಬಂದ ಪರಿಣಾಮ 407 ಮಿನಿ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಚಾಲಕ ಸಹಿತ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಬೈಂದೂರು ಸಮೀಪದ ಶಾಲೆ ಬಾಗಿಲು ಎಂಬಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಂದೂರು ಕಡೆಯಿಂದ ಸಿಮೆಂಟ್ ತುಂಬಿದ್ದ ಮಿನಿ ಲಾರಿ ಕುಂದಾಪುರ ಕಡೆಗೆ ಪ್ರಯಾಣಿಸುತ್ತಿತ್ತು. ಮಂಗಳವಾರ ಸಂಜೆ ಸುಮಾರು 5.20ರ ಸುಮಾರಿಗೆ ಬಿಜೂರು ಶಾಲೆ ಬಾಗಿಲು ನಡುವೆ ಇದ್ದಕ್ಕಿದ್ದಂತೆ ದನವೊಂದು ಅಡ್ಡ ಬಂದಿದೆ.
ಈ ವೇಳೆ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಲಾರಿ ಪಲ್ಟಿಯಾಗಿ ಹೆದ್ದಾರಿ ಪಕ್ಕದ ಹೊಂಡ ಪ್ರದೇಶಕ್ಕೆ ಬಿದ್ದಿದೆ. ಅಪಘಾತದ ಪರಿಣಾಮ ಸಿಮೆಂಟ್ ಚೀಲಗಳು ಚೆಲ್ಲಾಪಿಲ್ಲಿಯಾಗಿವೆ. ಘಟನೆಯಲ್ಲಿ ಲಾರಿಯಲ್ಲಿದ್ದ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.
Kshetra Samachara
23/08/2022 07:41 pm