ಮುಲ್ಕಿ:ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮೃತ ಯುವಕನನ್ನು ಮುಲ್ಕಿ ಕೆ.ಎಸ್ ರಾವ್ ನಗರದ ನಿವಾಸಿ ಬದ್ರುಲ್ ಮುನೀರ್ (23) ಎಂದು ಗುರುತಿಸಲಾಗಿದೆ.
ಮೃತ ಮುನೀರ್ ಬೈಕಂಪಾಡಿಯಲ್ಲಿ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದು ರಾತ್ರಿ ಕೆಲಸ ಮುಗಿಸಿ ವಾಪಸ್ ಬೈಕ್‌ನಲ್ಲಿ ಮನೆ ಕಡೆ ಬರುತ್ತಿದ್ದು ಕೊಲ್ನಾಡು ಜಂಕ್ಷನ್ ಬಳಿ ಹೆದ್ದಾರಿ ದಾಟಲು ನಿಂತಿದ್ದ ವೇಳೆ ಬೈಕ್‌ಗೆ ಹಿಂದಿನಿಂದ ಕಾರ್ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಸವಾರ ಮುನೀರ್ ಇದ್ದ ಬೈಕ್ ಎದುರು ಬದಿಯಲ್ಲಿ ಪೆಟ್ರೋಲ್ ಬಂಕ್ ಕಡೆ ಚಲಿಸುತ್ತಿದ್ದ ಬುಲೆಟ್‌ಗೆ ಡಿಕ್ಕಿ ಹೊಡೆದಿದ್ದು ಸರಣಿ ಅಪಘಾತ ನಡೆದಿತ್ತು.
ಅಪಘಾತದ ರಭಸಕ್ಕೆ ಬೈಕ್ ಸವಾರ ಮುನೀರ್, ಹಾಗೂ ಬುಲೆಟ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮುನೀರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು ಬುಲೆಟ್ ಸವಾರ ರಾಜೇಶ್ ಚೇತರಿಸಿಕೊಳ್ಳುತ್ತಿದ್ದು ಜೀವ ಅಪಾಯದಿಂದ ಪಾರಾಗಿದ್ದಾರೆ. ಸುರತ್ಕಲ್ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Kshetra Samachara
20/08/2022 10:38 pm