ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಟಯರ್ ಅಂಗಡಿಗೆ ಬೆಂಕಿ:ಭಾರೀ ನಷ್ಟ!

ಸುಳ್ಯ: ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕೂಲಿಶೆಡ್‌ನಲ್ಲಿರುವ ಟಯರ್ ಅಂಗಡಿಯೊಂದಕ್ಕೆ ತಡ ರಾತ್ರಿ ಬೆಂಕಿ ತಗುಲಿ,ಭಾರೀ ನಷ್ಟ ಉಂಟಾಗುರುವ ಬಗ್ಗೆ ವರದಿಯಾಗಿದೆ.

ಬೆಂಕಿ ತಗುಲಿ ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಚಿಮ್ಮಿತ್ತು. ಟಯರ್, ಟ್ಯೂಬ್ ರಿಪೇರಿ ಮತ್ತು ಮಾರಾಟದ ಅಂಗಡಿಗೆ ಬೆಂಕಿ ತಗುಲಿದ್ದು ಸಮೀಪದ ಗೂಡಂಗಡಿ, ಸೈಕಲ್ ರಿಪೇರಿ ಅಂಗಡಿ, ಹೋಟೆಲ್‌ಗೂ ಹಾನಿಯಾಗಿದೆ.

ಸುಳ್ಯದ ಅಗ್ನಿಶಾಮಕ ದಳ ಹಾಗು ಸ್ಥಳೀಯರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

17/07/2022 02:19 pm

Cinque Terre

12.54 K

Cinque Terre

0