ಕೋಟ: ಇಲ್ಲಿಗೆ ಸಮೀಪದ ಕೆದೂರು ಮಹಾಕಾಳಿ ದೇವಸ್ಥಾನದ ಸಮೀ ಪದ ರೈಲ್ವೆ ಟ್ರ್ಯಾಕ್ ಬಳಿ ಮುಂಬಯಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಮಂಗಳಾ ಲಕ್ಷದೀಪ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.
ಮಂಗಳೂರು ಡೊಂಗರಕೇರಿ ನಿವಾಸಿ ನಿತ್ಯಾನಂದ ಶೇಟ್ (52) ಆಯತಪ್ಪಿ ಬಿದ್ದು ಸಾವನ್ನಪ್ಪಿದವರು. ಇವರು ಮಹಾರಾಷ್ಟ್ರದಲ್ಲಿ ಶ್ರೀಗಳೊಬ್ಬರ ಚಾತುರ್ಮಾಸ ಸಮಾರಂಭ ಮುಗಿಸಿ ತಮ್ಮ ಸಮಾಜ ಬಾಂಧವರ ಜತೆ ಬರುತ್ತಿದ್ದಾಗ ಕೆದೂರು ರೈಲ್ವೆ ಟ್ರ್ಯಾಕ್ ಸಮೀಪ ಚಲಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಮೃತರು ಅವಿವಾಹಿತರಾಗಿದ್ದು, ಮಂಗಳೂರಿನ ಶಾವಿಗೆ ತಯಾರಿಕಾ ಕಾರ್ಖಾನೆಯಲ್ಲಿ
ಕಾರ್ಯನಿರ್ವಹಿಸುತ್ತಿದ್ದರು. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
16/07/2022 10:42 am